ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಜೂನ್‌ 8ಕ್ಕೆ ಎಲ್ಲಾ ದೇವಾಲಯಗಳು ತೆರೆಯಲಿವೆ.. - ಮಂಗಳೂರು ಲೆಟೆಸ್ಟ್ ನ್ಯೂಸ್

ಈ ಮೊದಲು ಜೂನ್‌ 1ಕ್ಕೆ ತೆರೆಯಬೇಕೆಂದು ನಿರ್ಧರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್‌ 8ಕ್ಕೆ ಅದನ್ನ ಮುಂದೂಡಲಾಗಿದೆ.

Kota shrinivas poojary
Kota shrinivas poojary

By

Published : May 31, 2020, 6:58 PM IST

ಮಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಸಹಿತ ಎಲ್ಲಾ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ಜೂನ್‌ 8ಕ್ಕೆ ಮುಂದೂಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಮೊದಲು ಜೂನ್‌ 1ಕ್ಕೆ ತೆರೆಯಬೇಕೆಂದು ನಿರ್ಧರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್‌ 8ಕ್ಕೆ ಅದನ್ನ ಮುಂದೂಡಲಾಗಿದೆ. ಎಲ್ಲಾ ಭಕ್ತರು ಸಹಕರಿಸಬೇಕೆಂದು ಸಚಿವರು ವಿನಂತಿಸಿದ್ದಾರೆ.

ದೇವಾಲಯಗಳ ಪ್ರವೇಶಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನ ಪಾಲಿಸಲಾಗುತ್ತೆ. ಹಾಗೇ ಭಕ್ತರು ಸಹಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದಿದ್ದಾರೆ ಸಚಿವರು.

ABOUT THE AUTHOR

...view details