ಕರ್ನಾಟಕ

karnataka

ETV Bharat / state

ಮಗನಿಂದಲೇ ಹಲ್ಲೆ.. ಗಂಭೀರ ಗಾಯಗೊಂಡಿದ್ದ ತಂದೆ ಚಿಕಿತ್ಸೆ ಫಲಿಸದೆ ಸಾವು - ಸುಳ್ಯ ಲೇಟೆಸ್ಟ್​ ಕ್ರೈಂ ನ್ಯೂಸ್​

ಮಗನಿಂದಲೇ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ತಂದೆ ಚಿಕಿತ್ಸೆ ಫಲಿಸದೆ ಸಾವನಪ್ಪಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

Bellare Police Station
ಬೆಳ್ಳಾರೆ ಪೊಲೀಸ್ ಠಾಣೆ

By

Published : May 20, 2023, 10:24 AM IST

ಸುಳ್ಯ(ದಕ್ಷಿಣ ಕನ್ನಡ): ಮೊದಲ ಪತ್ನಿಯ ಪುತ್ರ ತನ್ನ ತಂದೆಗೆ ಮರದ ಸಲಾಕೆಯಲ್ಲಿ ಹೊಡೆದು ಗಾಯಗೊಳಿಸಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಕ್ಕುಜಡ್ಕದ ದಿ.ಗುರುವ ಎಂಬವರ ಪುತ್ರ ಕಿಟ್ಟು (54) ಮೃತ ವ್ಯಕ್ತಿ. ಹರ್ಷಿತ್ ಕೊಲೆ ಆರೋಪಿ.

ಪ್ರಕರಣದ ವಿವರ: ಮೇ 11ರಂದು ಕಿಟ್ಟು ಅವರ ಮನೆಗೆ ಬಂದ ಅವರ ಮೊದಲ ಪತ್ನಿಯ ಮಗ ಹರ್ಷಿತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಬಳಿಕ ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯಿಂದ ಕಿಟ್ಟು ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದ. ಪರಿಣಾಮ ಕಿಟ್ಟು ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಅವರ ಪುತ್ರ ನಿತ್ಯಾನಂದ ಅವರು ಆ್ಯಂಬುಲೆನ್ಸ್​ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಹಳೆಯ ದ್ವೇಷದ ಕಾರಣದಿಂದ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಮೊದಲು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದೀಗ ವ್ಯಕ್ತಿ ಮೃತಪಟ್ಟಿರುವುದರಿಂದ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಹರ್ಷಿತ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ:ಪುತ್ತೂರಿನಲ್ಲಿ ಪೊಲೀಸ್​​ ದೌರ್ಜನ್ಯ ಪ್ರಕರಣ: ಇದು ಕಾಂಗ್ರೆಸ್​ ಕಿತಾಪತಿ- ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರಿನಲ್ಲಿ ಪೊಲೀಸ್​​ ದೌರ್ಜನ್ಯ:ಚುನಾವಣಾ ಫಲಿತಾಂಶದ ಬಳಿಕ ಪುತ್ತೂರು ಬಸ್ ನಿಲ್ದಾಣ ಸಮೀಪದ ಅರಣ್ಯ ಇಲಾಖೆಯ ಆವರಣ ಗೋಡೆ ಬಳಿ ಫ್ಲೆಕ್ಸ್‌ ಕಾಣಿಸಿಕೊಂಡಿತ್ತು. ಪುತ್ತೂರಿನಲ್ಲಿ 'ಬಿಜೆಪಿಯ ಸೋಲಿಗೆ ಕಾರಣಕರ್ತರಾದ ನಿಮಗೆ ಶ್ರದ್ಧಾಂಜಲಿ' ಎಂಬ ಒಕ್ಕಣೆ ಬರೆದು ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡರ ಚಿತ್ರಗಳನ್ನು ಅವಮಾನಿಸಲಾಗಿತ್ತು. ಇದರ ಬೆನ್ನಲ್ಲೇ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹ‌ರ್ ಅವರು ವಿವಾದಾಸ್ಪದ ಬ್ಯಾನರ್ ತೆರವು ಮಾಡಿ ದೂರು ನೀಡಿದ್ದರು. ಬಿಜೆಪಿ ನಿಯೋಗ ಕೂಡ ಪೊಲೀಸ್ ದೂರು ನೀಡಿತ್ತು. ಇದಾದ ಬಳಿಕ ಪೊಲೀಸರು ನರಿಮೊಗರು ಗ್ರಾಮದ ನಿವಾಸಿಗಳಾದ ವಿಶ್ವನಾಥ್, ಮಾಧವ, ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೀಶ್, ಈಶ್ವರ, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಬಂಧನದ ಸುದ್ದಿ ತಿಳಿಯುತ್ತಲೇ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಡಿವೈಎಸ್​ಪಿ ಕಚೇರಿಗೆ ಸೋಮವಾರ ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರಲ್ಲದೆ, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ವಶದಲ್ಲಿದ್ದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆರೋಪಿಗಳನ್ನು ಬಿಡುಗಡೆ ಮಾಡಿದ ಬಳಿಕ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಫೋಟೋ ವೈರಲ್ ಮಾಡಲಾಗಿತ್ತು.

ಇದನ್ನೂ ಓದಿ:ಕಟೀಲ್, ಡಿವಿಎಸ್ ಭಾವಚಿತ್ರಕ್ಕೆ ಅವಮಾನ: ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯದ ಸತ್ಯಾಸತ್ಯತೆ ಪರಿಶೀಲನೆ- ಎಸ್​ಪಿ

ABOUT THE AUTHOR

...view details