ಕರ್ನಾಟಕ

karnataka

ETV Bharat / state

ಶ್ರೀಲಂಕಾ ಸ್ಫೋಟ ಹಿನ್ನೆಲೆ ಮಂಗಳೂರಿನಲ್ಲೂ ಭದ್ರತಾ ಸಭೆ - Sri Lanka

ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್​ ಸ್ಫೋಟ ಪ್ರಕರಣದಿಂದ ಎಚ್ಚೆತ್ತಿರುವ ನಗರ ಪೊಲೀಸರು ಭದ್ರತೆಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಬಾಂಬ್​ ಸ್ಫೋಟ ಪ್ರಕರಣದ ಹಿನ್ನೆಲೆ ಮಂಗಳೂರಿನಲ್ಲಿ ಭದ್ರತೆ ಕೈಗೊಳ್ಳಲು ಸಲಹೆ ನೀಡಿದ ಪೊಲೀಸರು

By

Published : Apr 25, 2019, 11:33 PM IST

ಮಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ ಪ್ರಕರಣದ ಹಿನ್ನೆಲೆ ಮಂಗಳೂರಿನಲ್ಲಿಯೂ ಭದ್ರತೆ ಕೈಗೊಳ್ಳಲು ಇಲ್ಲಿನ ಪೊಲೀಸರು ಸಲಹೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಮ್ಮ ಕಚೇರಿಯಲ್ಲಿ ಪ್ರಮುಖ ಉದ್ದಿಮೆ, ಮಾಲ್​, ಧಾರ್ಮಿಕ ಸ್ಥಳಗಳ ನಿರ್ವಾಹಕರ ಸಭೆ ಕರೆದು ಮಹತ್ವದ ಆದೇಶ ಹೊರಡಿಸಿದ್ದಾರೆ.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಂಆರ್​​ಪಿಎಲ್​, ಎನ್​​ಎಂಪಿಟಿ, ಇನ್ಫೋಸಿಸ್​, ಮಾಲ್ ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳ ನಿರ್ವಾಹಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಶ್ರೀಲಂಕಾದ ಸ್ಫೋಟ ಪ್ರಕರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರಿನ ವಿಮಾನ ನಿಲ್ದಾಣ, ಮಾಲ್​​, ಪ್ರಮುಖ ಉದ್ದಿಮೆ ಕೇಂದ್ರಗಳಲ್ಲಿ ಯಾರಾದರೂ ಸಂಶಯಾಸ್ಪದ ವ್ಯಕ್ತಿ ಕಂಡು ಬಂದರೆ ಅಂತವಯನ್ನು ತಪಾಸಣೆ ಮಾಡುವಂತೆ ಹಾಗೂ ಅನುಮಾನ ಬಂದ ವ್ಯಕ್ತಿಯ ಬಗ್ಗೆ ಪೊಲೀಸ್​ ಠಾಣೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ABOUT THE AUTHOR

...view details