ಪೇಸ್ಟ್ ರೂಪದಲ್ಲಿ 41.33 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ: ಆರೋಪಿ ಬಂಧನ - Kasaragudu man arrested by Mangalore police
ಕಾಸರಗೋಡಿನ ಜಾಫರ್ ಕಲ್ಲಿಂಗಾಲ್ ಬಂಧಿತ ಆರೋಪಿ. ಜಾಫರ್ ಕಲ್ಲಿಂಗಾಲ್ ದುಬೈಯಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಪಾಸಣೆ ನಡೆಸಿದ್ದಾರೆ. ಆಗ ಆರೋಪಿ ಅನುಮಾನ ಬಾರದಂತೆ ಚಿನ್ನವನ್ನು ಪ್ಯಾಕ್‌ಮಾಡಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಮಂಗಳೂರು: ಪೇಸ್ಟ್ ರೂಪದಲ್ಲಿ ಅನುಮಾನ ಬಾರದಂತೆ ಪ್ಯಾಕ್ ಮಾಡಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಓರ್ವನನ್ನು ಬಂಧಿಸಿ 41.33 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಜಾಫರ್ ಕಲ್ಲಿಂಗಾಲ್ ಬಂಧಿತ ಆರೋಪಿ. ಜಾಫರ್ ಕಲ್ಲಿಂಗಾಲ್ ದುಬೈಯಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಪಾಸಣೆ ನಡೆಸಿದ್ದಾರೆ. ಆಗ ಆರೋಪಿ ಅನುಮಾನ ಬಾರದಂತೆ ಚಿನ್ನವನ್ನು ಪ್ಯಾಕ್‌ಮಾಡಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ತಕ್ಷಣ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನದ ಸಹಿತ ಆರೋಪಿಯನ್ನು ವಶಕ್ಕೆ ಪಡೆದು. ಆರೋಪಿ ಬಳಿಯಿದ್ದ 854 ಗ್ರಾಂ ತೂಕದ 41.33 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ:ಚಿನ್ನಾಭರಣ ಮಳಿಗೆ ಮಾಲೀಕ ಕೋವಿಡ್‌ಗೆ ಬಲಿ: ಸಹೋದರ 4 ಕೋಟಿ ರೂ ಮೌಲ್ಯದ ಚಿನ್ನಸಮೇತ ಪರಾರಿ