ಕರ್ನಾಟಕ

karnataka

By

Published : Oct 11, 2021, 7:03 AM IST

ETV Bharat / state

ಕೊಣಾಜೆ: ಅಂಗಡಿಗೆ ಬಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿಯ ಬಂಧನ

ಬಾಲಕಿ ಅಂಗಡಿಗೆ ಬಂದಿದ್ದಾಗ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

shop-owner-arrested-for-sexual-harass-on-minor-girl
ಅಂಗಡಿಗೆ ಬಂದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ

ಮಂಗಳೂರು (ದ.ಕ):ಅಂಗಡಿಗೆ ಬಂದಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್​ ಠಾಣಾ ವ್ಯಾಪ್ತಿಯ ಕೊಣಾಜೆ ಜಂಕ್ಷನ್ ಬಳಿ ನಿನ್ನೆ ನಡೆದಿದೆ. ಆರೋಪಿ ಉಸ್ಮಾನ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಕೊಣಾಜೆ ಜಂಕ್ಷನ್​​​ನಲ್ಲಿ ದಿನಸಿ ಹಾಗೂ ಸ್ವೀಟ್ಸ್ ಅಂಗಡಿ ಹೊಂದಿದ್ದಾನೆ. ಭಾನುವಾರ ಬಾಲಕಿ ಅಂಗಡಿಗೆ ಬಂದಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.

ಈ ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಸ್ಥಳದಲ್ಲಿ ನೆರೆದಿದ್ದ ಜನರನ್ನು ಕಳುಹಿಸಿದ್ದಾರೆ. ಈ ವೇಳೆ ಕೆಲವರು ಉಸ್ಮಾನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ಬಂಟ್ವಾಳ ಬಾಲಕಿ ಅಪಹರಣ, ಅತ್ಯಾಚಾರ ಪ್ರಕರಣ : ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಕೋರ್ಟ್

ABOUT THE AUTHOR

...view details