ಮಂಗಳೂರು: ಒಳ ಉಡುಪಿನಲ್ಲಿ ಚಿನ್ನ ಅಡಗಿಸಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿ 2.15 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಫೈಜಲ್ ತೊಟ್ಟಿ ಮೇಲ್ಪರಂಬ (37) ಮತ್ತು ಮುಹಮ್ಮದ್ ಸುಹೈಬ್ ಮುಗು (31) ಬಂಧಿತರು. ಬಂಧಿತರಿಂದ 1.09 ಕೋಟಿ ರೂ. ಮೌಲ್ಯದ 2.15 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ:ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನಿಂದ 31 ಬಿಟ್ ಕಾಯಿನ್ ಜಪ್ತಿ.. ಇದರ ಮೌಲ್ಯವೆಷ್ಟು ಗೊತ್ತೇ?
ಇವರಿಬ್ಬರೂ ಶಾರ್ಜಾದಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ ಬಂದಿದ್ದು, ಇವರನ್ನು ತಪಾಸಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಇವರಿಬ್ಬರನ್ನು ತಪಾಸಣೆ ನಡೆಸಿದ ವೇಳೆ, ಇವರ ಒಳ ಉಡುಪಿನಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿರಿಸಿ ಸಾಗಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸದ್ಯ ಬಂಧಿತರಿಂದ 1.09 ಕೋಟಿ ರೂ. ಮೌಲ್ಯದ 2.154 ಕೆ.ಜಿ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನ ವಶಪಡಿಸಿಕೊಳ್ಳಲಾಗಿದೆ.