ಮಂಗಳೂರು :ಮೂಡುಬಿದಿರೆ ತಾಲೂಕಿನಲ್ಲಿ 2 ಮನೆಗಳು, 1 ಕಾರು, 1 ದ್ವಿಚಕ್ರ ವಾಹನ ಸೇರಿ 4 ದರೋಡೆ ಪ್ರಕರಣ ಬೆಳಕಿಗೆ ಬಂದಿವೆ. ಎರಡು ಕಾರುಗಳಲ್ಲಿ ಆಗಮಿಸಿರುವ ಡಕಾಯಿತರು ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದರೋಡೆ ಪ್ರಕರಣ.. ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ಮೂಡುಬಿದಿರೆ ತಾಲೂಕಿನ ತೋಡಾರಿನ ಅರುಣ್ ಎಂಬುವರ ಮನೆಗೆ ಕಲ್ಲು ಎಸೆದು, ಅಂಗಳದಲ್ಲಿದ್ದ ಕಾರಿನ ಹಿಂಬದಿಯ ಗಾಜಿಗೆ ಮತ್ತು ಗಾಂಧಿನಗರದ ಹರಿಶ್ಚಂದ್ರ ನಾಯ್ಕ್ ಎಂಬುವರ ಮನೆಗೆ ಕಲ್ಲು ಎಸೆದು ಮತ್ತು ಬಾಗಿಲಿಗೆ ಕಾಲಿನಿಂದ ಒದ್ದಿದ್ದಾರೆ.
ಅಂಗಳದಲ್ಲಿದ್ದ ಓಮ್ನಿ ಕಾರಿನ ಗ್ಲಾಸ್ ಪುಡಿ ಮಾಡಿ ಒಳಗಡೆಯಿದ್ದ 4 ಸಾವಿರ ರೂ. ಹಣ ದೋಚಿದ್ದಾರೆ ಎಂದು ದೂರು ನೀಡಲಾಗಿದೆ. ಎರಡೂ ಕಡೆಗಳಲ್ಲೂ ಕಲ್ಲು ಹೊಡೆದ ಶಬ್ಧಕ್ಕೆ ಮನೆಯವರು ಎದ್ದು ಬೊಬ್ಬೆ ಹಾಕಿದಾಗ, ಕಳ್ಳರು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ ಕಡಂದಲೆಯ ಬಿ ಟಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಸವಾರನಿಗೆ ತಲವಾರು ತೋರಿಸಿ ಬೆದರಿಸಿ ಮೆಣಸಿನ ಪುಡಿ ಎರಚಿ ಆತನಲ್ಲಿದ್ದ ನಗದು ಮತ್ತು ಬೈಕ್ನ ದರೋಡೆ ಮಾಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ಕಮಿಷನರ್ ಭೇಟಿ :ಪ್ರಕರಣ ನಡೆದಿರುವ ಮೂರು ಕಡೆಗಳಿಗೂ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ ಎಸ್, ಉಪ ನಿರೀಕ್ಷಕ ಸುದೀಪ್, ಅಪರಾಧ ತಡೆ ವಿಭಾಗದ ಪೊಲೀಸರು ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ.
ಓದಿ:ಮಂಗಳೂರು : ದರೋಡೆ ನಾಟಕವಾಡಿ ಸಿಕ್ಕಿಬಿದ್ದ ಹವಾಲ ದಂಧೆಕೋರರು