ಕರ್ನಾಟಕ

karnataka

ETV Bharat / state

ಬಂಟ್ವಾಳ : ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು - Bantvala crime latest news

ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಪೆಟ್ರೋಲ್ ಬಂಕ್ ಗೆ ನುಗ್ಗಿದ ದರೋಡೆಕೋರರ ತಂಡವೊಂದು ಸಿಬ್ಬಂದಿಯನ್ನು ಬೆದರಿಸಿ ಹಣ ದೋಚಿದ ಘಟನೆ ನಡೆದಿದೆ.

Bantvala
Bantvala

By

Published : Sep 20, 2020, 8:14 PM IST

ಬಂಟ್ವಾಳ:ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಪೆಟ್ರೋಲ್ ಬಂಕ್ ಗೆ ನುಗ್ಗಿದ ದರೋಡೆಕೋರರ ತಂಡವೊಂದು ಸಿಬ್ಬಂದಿಯನ್ನು ಬೆದರಿಸಿ ಹಣ ದೋಚಿದ ಘಟನೆ ನಡೆದಿದೆ.

ಪೆಟ್ರೋಲ್ ಬಂಕ್ ಗೆ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಅಲ್ಲಿದ್ದ ಕೆಲಸಗಾರರಿಗೆ ಚೂರಿ ಹಾಗೂ ರಾಡ್ ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಬೆದರಿಸಿದ್ದಾರೆ. ಬಳಿಕ 22 ಸಾವಿರ ನಗದು ಹಾಗೂ ಮೊಬೈಲ್ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್ಐ ಕಲೈಮಾರ್, ಎ.ಎಸ್.ಐ. ಶೈಲೇಶ್, ಎಚ್.ಸಿ.ಸುರೇಶ್ ಪಡಾರ್, ಕೃಷ್ಣ ಕುಲಾಲ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕಳ್ಳರ ತಂಡ ಬಂಟ್ವಾಳ ಸೇರಿದಂತೆ ಮಂಗಳೂರಿನ ಹಲವು ಪೆಟ್ರೋಲ್ ಬಂಕ್ ಗಳಿಗೆ ನುಗ್ಗಿ ಹಣ ದೋಚುವುದಕ್ಕೆ ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details