ಕರ್ನಾಟಕ

karnataka

ETV Bharat / state

ಮಳೆಗಾಲ ಎದುರಿಸಲು ಪುತ್ತೂರು ತಾಲೂಕು ಸಿದ್ಧ: ತಹಸೀಲ್ದಾರ್ ರಮೇಶ್ ಬಾಬು

ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ರಾಜ್ಯ ಪ್ರವೇಶಿಸುತ್ತದೆ. ಮಳೆಗಾಲವನ್ನು ಎದುರಿಸಲು ಪುತ್ತೂರು ತಾಲೂಕಿನಲ್ಲಿ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಲಾಗಿದ್ದು, ಯಾವುದೇ ಅನಾಹುತ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.

Puttur
Puttur

By

Published : May 25, 2021, 9:51 AM IST

ಪುತ್ತೂರು(ದ.ಕ):ಪ್ರಾಕೃತಿಕ ವಿಕೋಪ, ಪ್ರವಾಹ ಸೇರಿದಂತೆ ಮಳೆಗಾಲವನ್ನು ಎದುರಿಸಲು ಪುತ್ತೂರು ತಾಲೂಕಿನಲ್ಲಿ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಲಾಗಿದ್ದು, ಮಳೆಗಾಲ ಎದುರಿಸಲು ಪುತ್ತೂರು ತಾಲೂಕು ಸಿದ್ದಗೊಂಡಿದೆ. ಮಳೆಗಾಲದಲ್ಲಿ ಯಾವುದೇ ಅನಾಹುತ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.

ಪುತ್ತೂರು ತಾಲೂಕಿನಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ಕುರಿತು ಮಾತನಾಡಿದ ತಹಶೀಲ್ದಾರ್​

ಉಪ್ಪಿನಗಂಡಿಯಲ್ಲಿ ಮಳೆಗಾಲಕ್ಕೆ ಪೂರ್ವ ತಯಾರಿಯಾಗಿ 2 ಬೋಟ್‌ಗಳನ್ನು ಸಿದ್ದಗೊಳಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ 5 ಮಂದಿ ಹೋಂ ಗಾರ್ಡ್​ಗಳನ್ನು ಕಳೆದ ಒಂದು ವಾರಗಳಿಂದ ನಿಯೋಜಿಸಲಾಗಿದೆ. ಅದರೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಜ್ಜುಗೊಳಿಸಲಾಗಿದೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಕಳೆದ ವರ್ಷ ಯಾವುದೇ ಪ್ರವಾಹ ಬಂದಿಲ್ಲ. ಆದಾಗ್ಯೂ ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗುವ ಸಂದರ್ಭದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದು ಸಾಮಾನ್ಯವಾಗಿದೆ. ಈ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳ ಸುಮಾರು 15 ಮನೆಯವರಿಗೆ ಈಗಾಗಲೇ ನೋಟೀಸು ನೀಡಿ ಎಚ್ಚರಕೆ ನೀಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಕಾಳಜಿ ಕೇಂದ್ರ(ಪರಿಹಾರ ಕೇಂದ್ರ)ವಾಗಿ ಗುರುತಿಸಲಾಗಿದೆ. ಕಾಳಜಿ ಕೇಂದ್ರಕ್ಕೆ ದಿನಕ್ಕೊಬ್ಬ ಕಂದಾಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅತಿ ಪ್ರವಾಹ ಕಂಡು ಬಂದಲ್ಲಿ ಈಗಾಗಲೇ ನೋಟೀಸು ನೀಡಲಾದ 15 ಕುಟುಂಬಗಳು ಸೇರಿದಂತೆ ಎಲ್ಲಾ ಸಂತ್ರಸ್ಥ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗುವುದು. ಸಂತ್ರಸ್ತ ಕುಟುಂಬಗಳು ಪರಿಹಾರ ಕೇಂದ್ರಕ್ಕೆ ಬರಲು ಒಪ್ಪದಿದ್ದಲ್ಲಿ ಪೊಲೀಸ್ ಇಲಾಖೆ, ಹೋಂ ಗಾರ್ಡ್ ಮತ್ತು ಕಂದಾಯ ಇಲಾಖೆಯ ಮೂಲಕ ಜಂಟಿ ಕಾರ್ಯಾಚರಣೆ ನಡೆಸಿ ಅವರ ಮನವೊಲಿಸಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಅವರು ತಿಳಿಸಿದರು.

2020-21 ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪ ಪರಿಹಾರವಾಗಿ ಸರ್ಕಾರದಿಂದ ರೂ. 60 ಲಕ್ಷ ಅನುದಾನ ಬಂದಿದ್ದು, ಈ ಪೈಕಿ ಕಳೆದ ವರ್ಷ 1 ಜೀವ ಹಾನಿಗೆ ರೂ. 5 ಲಕ್ಷ, 1 ಜಾನುವಾರು ಜೀವ ಹಾನಿಗೆ ರೂ. 10 ಸಾವಿರ, 9 ಮನೆ ಹಾನಿ ತೀವ್ರ ಹಾನಿಗೆ ರೂ. 3.30 ಲಕ್ಷ, 264 ಪಕ್ಕಾಮನೆ ಭಾಗಶಃ ಹಾನಿಗೆ ರೂ.17,57,100 ತೋಟಗಾರಿಕಾ ಬೆಳೆ ಹಾನಿಗೆ ರೂ.72,277, 16 ದನದ ಹಟ್ಟಿ ಹಾನಿಗೆ ರೂ. 33,600, ಮುಂಜಾಗೃತಾ ಕ್ರಮ ಕರ್ತವ್ಯ ನಿರ್ವಹಿಸಿದ16 ಹೋಂ ಗಾರ್ಡ್​ಗಳಿಗೆ ರೂ.84 ಸಾವಿರ ಮತ್ತು 8 ಕೋವಿಡ್ ಪ್ರಕರಣಕ್ಕೆ ರೂ. 5,53,175 ವಿನಿಯೋಗಿಸಲಾಗಿದ್ದು, ಒಟ್ಟು ರೂ. 33,40,152 ವಿನಿಯೋಗಿಸಲಾಗಿದೆ. ಅನುದಾನದಲ್ಲಿ ಉಳಿಕೆಯಾದ ರೂ. 26,31.759 ಹಣವನ್ನು ಈ ಬಾರಿ ವಿನಿಯೋಗಿಸಲಾಗುವುದು. ಹೆಚ್ಚುವರಿ ಅನುದಾನ ಬೇಕಾದಲ್ಲಿ ಈ ಅನುದಾನ ಮುಗಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ:ಕೊಲತಾರುಪದವಿನಲ್ಲಿ ಸುರಂಗ ಮಾರ್ಗ ಪತ್ತೆ

ABOUT THE AUTHOR

...view details