ಮಂಗಳೂರು: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಗರದ ಶಾರದಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ರೋಹನ್ ರಾವ್ ಹೆಚ್. 590 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಉತ್ತಮ ಫಲಿತಾಂಶ ಪಡೆದ ಮಂಗಳೂರಿನ ಶಾರದಾ ಪಿಯು ಕಾಲೇಜ್ ವಿದ್ಯಾರ್ಥಿಗಳು - kannada news
ರಾಜ್ಯದಲ್ಲಿ ಪಿಯುಸಿ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ರೋಹನ್ ರಾಮ್ ಎಂಬ ವಿದ್ಯಾರ್ಥಿ 590 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಉತ್ತಮ ಫಲಿತಾಂಶ ಗಳಿಸಿದ ಶಾರದಾ ಪಿ.ಯು ಕಾಲೇಜ್ ವಿದ್ಯಾರ್ಥಿಗಳು
ಬೈಂದೂರು ತಾಲೂಕಿನ ಉಪ್ಪುಂದದ ನಿವಾಸಿ ರೋಹನ್, ಫಿಸಿಕ್ಸ್ , ಕೆಮಿಸ್ಟ್ರಿಯಲ್ಲಿ ತಲಾ 100, ಗಣಿತ, ಇಲೆಕ್ಟ್ರಾನಿಕ್ಸ್ನಲ್ಲಿ ತಲಾ 99, ಕನ್ನಡದಲ್ಲಿ 97 ಹಾಗೂ ಇಂಗ್ಲಿಷ್ನಲ್ಲಿ 95 ಅಂಕಗಳನ್ನು ಗಳಿಸಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುವ ಪೃಥ್ವಿ ರೈ 592 ಅಂಕ ಗಳಿಸಿದ್ದಾನೆ.ಮುಂದೆ ಸಿಎ ಆಗಬೇಕೆಂದು ಆಕಾಂಕ್ಷೆ ಹೊಂದಿರುವ ಪೃಥ್ವಿ ರೈ, ಬೇಸಿಕ್ ಮ್ಯಾಥ್ಸ್, ಅಕೌಂಟೆನ್ಸಿ, ಸಂಸ್ಕೃತದಲ್ಲಿ ತಲಾ 100 ಅಂಕ, ಸ್ಟ್ಯಾಟಸ್ಟಿಕ್ಸ್, ಬ್ಯುಸಿನೆಸ್ ಸ್ಟಡೀಸ್ನಲ್ಲಿ ತಲಾ 99 ಹಾಗೂ ಇಂಗ್ಲಿಷ್ನಲ್ಲಿ 94 ಅಂಕ ಗಳಿಸಿದ್ದಾನೆ.