ಕರ್ನಾಟಕ

karnataka

ETV Bharat / state

ಅರಣ್ಯಾಧಿಕಾರಿಗಳಿಂದ ಅಮಾಯಕನ ಹಲ್ಲೆಆರೋಪ: ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ - forest department

ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ಮಾಡಿರುವ ಆರೋಪದಡಿ ಲೋಕೇಶ್ ಎಂಬವವರಿಗೆ ಅರಣ್ಯಧಿಕಾರಿಗಳು ₹25 ಸಾವಿರ  ದಂಡ ವಿಧಿಸಿ, ಈ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಅರಣ್ಯ ಇಲಾಖೆಯ ಮುಂಭಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಅರಣ್ಯಾಧಿಕಾರಿಗಳಿಂದ ಹಲ್ಲೆಆರೋಪ : ಇಲಾಖೆಯ ಮುಂಭಾಗ ಸಾರ್ವಜನಿಕರಿಂದ ಪ್ರತಿಭಟನೆ

By

Published : Sep 22, 2019, 3:28 AM IST

ಮಂಗಳೂರು:ಕಡಬ ತಾಲೂಕು ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ಆರೋಪದಡಿ ಲೋಕೇಶ್ ಎಂಬವರ ಮೇಲೆ ಅರಣ್ಯಾಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ನೀತಿ ತಂಡದ ನೇತೃತ್ವದಲ್ಲಿ ಸುಬ್ರಹ್ಮಣ್ಯ ಸಮೀಪ ಕೆಂಜಳದ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಅರಣ್ಯಾಧಿಕಾರಿಗಳಿಂದ ಹಲ್ಲೆಆರೋಪ: ಇಲಾಖೆಯ ಮುಂಭಾಗ ಸಾರ್ವಜನಿಕರಿಂದ ಪ್ರತಿಭಟನೆ

ಕೆಲವು ದಿನಗಳ ಹಿಂದೆ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ನಡೆದಿತ್ತು. ಈ ಮರಗಳನ್ನು ಲೋಕೇಶ್ ಎಂಬವರು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಲೋಕೇಶ್ ಅವರನ್ನು ಅರಣ್ಯಧಿಕಾರಿಗಳು ಬಂಧಿಸಿ ಅವರಿಗೆ ₹25 ಸಾವಿರ ದಂಡ ವಿಧಿಸಿದ್ದರು. ಈ ಸಂದರ್ಭದಲ್ಲಿ ಹಲ್ಲೆ ಕೂಡಾ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ಕೆಂಜಾಳದಲ್ಲಿ ನಾಗರಿಕರಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ನೀತಿ ತಂಡದ ಅಧ್ಯಕ್ಷ ಸುಜಿತ್ ಸಿ.ಫಿಲಿಪ್, ಲೋಕೇಶ್ ಎಂಬವರು ನಿರಪರಾಧಿಯಾಗಿದ್ದಾರೆ. ಅವರ ಮೇಲೆ ವಿನಾ ಕಾರಣ ಹಲ್ಲೆ ನಡೆಸಲಾಗಿದೆ. ಭಾಗಿಮಲೆ ಮೀಸಲು ಅರಣ್ಯದಲ್ಲಿ ಬೃಹತ್ ಗಾತ್ರದ ಮರ ಕಳವು ನಡೆದಿದ್ದು, ಇದರ ಹಿಂದೆ ದೊಡ್ಡ ಜಾಲವಿರುವ ಸಂಶಯವಿದೆ. ಆದರೆ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಅಮಾಯಕನನಿಗೆ ದಂಡ ವಿಧಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಲೋಕೇಶ್ ಮೇಲೆ ಹಲ್ಲೆ ನಡೆಸಿದ ಅರಣ್ಯ ರಕ್ಷಕ ಅಶೋಕ್ ಹಾಗೂ ಅವರಿಗೆ ಸಹಕರಿಸಿದ ಇತರ ಅರಣ್ಯ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡುವಂತೆ ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಇದಕ್ಕೆ ಒಂದು ವಾರದ ಗಡುವನ್ನು ಪ್ರತಿಭಟನಾಕಾರರು ನೀಡಿದರು. ಇಲ್ಲದೇ ಹೋದಲ್ಲಿ ಮುಂದಿನ ಸೋಮವಾರ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಇದಕ್ಕಿಂತಲೂ ಹೆಚ್ಚಿನ ಜನರನ್ನು ಸೇರಿಸಿ ಭಾರಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೆ ಈ ಮಧ್ಯೆ ನೀತಿ ತಂಡದಿಂದ ಬೆಂಗಳೂರು ಮಾನವ ಹಕ್ಕುಗಳ ಕಚೇರಿಗೂ ದೂರು ಕೂಡ ನೀಡಲಾಗಿದೆ.

ಜಿಲ್ಲಾ ಅರಣ್ಯ ಅಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಬಂದ ವಲಯ ಅರಣ್ಯ ಅಧಿಕಾರಿ ಶಿವಾನಂದ ಶಿವಶಿಂಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅರಣ್ಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಲಾಯಿತು.

ABOUT THE AUTHOR

...view details