ಮಂಗಳೂರು:ಭಾರತ ಸರ್ಕಾರ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ಗೆ ತೈಲ ಪರಿಷ್ಕರಣೆಯ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಭಾರತ ಸರ್ಕಾರದ ಪೇಟೆಂಟ್ ಪಡೆದುಕೊಂಡಿದೆ. ಅಕ್ಟೋಬರ್ 1 ರಂದು ಈ ಪೇಟೆಂಟ್ ಎಂಆರ್ಪಿಎಲ್ಗೆ ದೊರೆತಿದೆ.
ತೈಲ ಪರಿಷ್ಕರಣೆ ತಂತ್ರಜ್ಞಾನ ಅಭಿವೃದ್ದಿ ಸಂಶೋಧನೆಯ ಎಂಆರ್ಪಿಎಲ್ಗೆ ಪೇಟೆಂಟ್
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ಗೆ ತೈಲ ಪರಿಷ್ಕರಣೆಯ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಭಾರತ ಸರ್ಕಾರದ ಪೇಟೆಂಟ್ ಪಡೆದುಕೊಂಡಿದೆ.
ಎಂಆರ್ಪಿಎಲ್ಗೆ ಪೇಟೆಂಟ್
Process distillation Of Petroleum Fractions- By Making use Of Fuel Gas/ Hydrocarbon vapours instead of Steam ಎಂಬ ವಿಷಯದ ಮೇಲಿನ ಎಂಆರ್ಪಿಎಲ್ ಸಂಶೋಧನೆಗೆ ಈ ಪೇಟೆಂಟ್ ದೊರೆತಿದೆ.
ಎಂಆರ್ಪಿಎಲ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಂದಾಳತ್ವದಲ್ಲಿ ಈ ಸಂಶೋಧನೆ ನಡೆಸಲಾಗಿತ್ತು. ನೀರಿನ ಬಳಸುವಿಕೆಯನ್ನು ಕಡಿಮೆಗೊಳಿಸುವ ಈ ತಂತ್ರಜ್ಞಾನವು ಇಂಧನ ಬಳಕೆಯನ್ನು ಮಿತಗೊಳಿಸುವಲ್ಲಿಯೂ ಆ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಲು ಈ ಸಂಶೋಧನೆ ಸಹಕಾರಿಯಾಗಲಿದೆ ಎಂದು ಎಂಆರ್ಪಿಎಲ್ನ ಪ್ರಕಟಣೆ ತಿಳಿಸಿದೆ.