ಕರ್ನಾಟಕ

karnataka

ETV Bharat / state

ರೆಸ್ಟೋರೆಂಟ್‌ನಲ್ಲಿ ಅಶ್ಲೀಲ ಸಿನಿಮಾ ಆಡಿಯೋ ಜೋರಾಗಿ ಸೌಂಡ್ ಬಿಟ್ಟರು.. ಪ್ರಶ್ನಿಸಿದವನ ಮೇಲೆ ಹಲ್ಲೆ.. - Mangalore

ಈ ಹಿಂದೆಯೇ ಮುನೀರ್ ಅವರು ಅಶ್ಲೀಲ ಆಡಿಯೋ ಕೇಳಿಸಿರೋದಕ್ಕೆ ಮಹಮ್ಮದ್ ಸಿನಾನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದೀಗ ಮಹಮ್ಮದ್ ಸಿನಾನ್ ಅವರು ಪ್ರತಿ ದೂರು ದಾಖಲಿಸಿದ್ದಾರೆ..

Mangalore
ಮಂಗಳೂರು

By

Published : Jul 2, 2021, 7:03 AM IST

Updated : Jul 2, 2021, 7:11 AM IST

ಮಂಗಳೂರು :ವೈಫೈ ಬಳಸಿ ಜೋರಾಗಿ ಅಶ್ಲೀಲ ಆಡಿಯೋ ಕೇಳಿಸಿದ್ದನ್ನು ಪ್ರಶ್ನಿಸಿರುವುದಕ್ಕೆ ಮುಖಕ್ಕೆ ಗುದ್ದಿ ಹಲ್ಲೆ ನಡೆಸಲಾಗಿದೆ ಎಂದು ಟಿಐಎಸ್ ಕೆಫೆ ರೆಸ್ಟೋರೆಂಟ್ ಮ್ಯಾನೇಜರ್ ಬ್ಯುಸಿನೆಸ್ ಅಡ್ವೈಸರ್ ಮಹಮ್ಮದ್ ಸಿನಾನ್ ಎಂಬುವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ‌.

ಜೂನ್‌ 28 ರಂದು ಸಂಜೆ 6.30ರ ಸುಮಾರಿಗೆ ತಮ್ಮ ಟಿಐಎಸ್ ಕೆಫೆ ವೈಫೈ ಬಳಸಿಕೊಂಡು ಯಾರೋ ಒಬ್ಬಾತ ಅಶ್ಲೀಲ ಸಿನಿಮಾ/ಚಿತ್ರದ ಆಡಿಯೋವನ್ನು ಜೋರಾಗಿ ಪ್ಲೇ ಮಾಡಿದ್ದಾನೆ‌. ಈ ಸಂದರ್ಭ ತಾನು ಯಾರು ಈ ರೀತಿ ಅಶ್ಲೀಲ ಆಡಿಯೋ ಜೋರಾಗಿ ಕೇಳಿಸುತ್ತಿರುವುದು ಎಂದು ತಿಳಿಯುವ ಸಲುವಾಗಿ ಹೊರಗೆ ಹೋದೆ. ಅಲ್ಲಿ ನನ್ನ ಪರಿಚಯದ 4 ರಿಂದ 5 ಮಂದಿ ಯುವಕರು ಕುಳಿತಿದ್ದರು.

ನಾನು ಅವರಲ್ಲಿ ಯಾರು ಈ ಅಶ್ಲಿಲ ಆಡಿಯೋ ಪ್ಲೇ ಮಾಡಿದ್ದು? ಎಂದು ಕೇಳಿದಾಗ ಅವರಲ್ಲಿ ಮುನೀರ್ ಎಂಬಾತ ನನ್ನ ಮುಖಕ್ಕೆ ಗುದ್ದಿ ಗಾಯಗೊಳಿಸಿ ನೆಲಕ್ಕೆ ಬೀಳಿಸಿದ. ಅಲ್ಲದೇ, ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆಂದು ಮಹಮ್ಮದ್ ಸಿನಾನ್ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ಈ ಹಿಂದೆಯೇ ಮುನೀರ್ ಅವರು ಅಶ್ಲೀಲ ಆಡಿಯೋ ಕೇಳಿಸಿರೋದಕ್ಕೆ ಮಹಮ್ಮದ್ ಸಿನಾನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದೀಗ ಮಹಮ್ಮದ್ ಸಿನಾನ್ ಅವರು ಪ್ರತಿ ದೂರು ದಾಖಲಿಸಿದ್ದಾರೆ.

Last Updated : Jul 2, 2021, 7:11 AM IST

ABOUT THE AUTHOR

...view details