ಕರ್ನಾಟಕ

karnataka

ETV Bharat / state

ಟ್ಯಾಂಕರ್​ನಲ್ಲಿ ನೀರು ಸರಬರಾಜಿಗೆ 14 ಬಾವಿಗಳ ದುರಸ್ತಿ: ಸಚಿವ ಯು.ಟಿ.ಖಾದರ್

ಜಿಲ್ಲೆಯಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಟ್ಯಾಂಕರ್​ನಿಂದ ನೀರು ಪೂರೈಸಲಾಗುತ್ತಿದ್ದು. ಇದಕ್ಕಾಗಿ ಹದಿನಾಲ್ಕು ಬಾವಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ಸಚಿವ ಯುಟಿ ಖಾದರ್​ ತಿಳಿಸಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್

By

Published : May 20, 2019, 7:33 AM IST

ಮಂಗಳೂರು :ನಗರದಲ್ಲಿ ಜಿಲ್ಲಾಡಳಿತ ನೀರಿನ ಸಮಸ್ಯೆಯ ಪರಿಹಾರಕ್ಕೆ ತಿಂಗಳ ಹಿಂದಿನಿಂದಲೇ ಯೋಜನೆ ಹಾಕಿರುವುದರಿಂದ ಇಷ್ಟೊಂದು ನೀರಿನ ಅಭಾವವಿದ್ದರೂ ಸಹ ಜನರ ಸಹಕಾರದಿಂದ ಒಂದು ಹಂತದವರೆಗೆ ನಿಭಾಯಿಸಿಕೊಂಡು ಬರಲಾಗುತ್ತಿದೆ. ಜೂನ್ 6 ರವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಪೂರ್ಣ ನೀರು ಸ್ಥಗಿತಗೊಂಡ ಸಂದರ್ಭ ಮನಪಾ 20 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದರು‌.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್

ಟ್ಯಾಂಕರ್​ಗಳಿಗೆ ನೀರು ಸರಬರಾಜು ಮಾಡಲು 14 ತೆರೆದ ಬಾವಿಗಳನ್ನು ದುರಸ್ತಿ ಮಾಡಲಾಗಿದೆ. ಅಲ್ಲದೆ ಇನ್ನೂ 15 ಕೊಳವೆ ಬಾವಿಗಳನ್ನು ಕೊರೆಯಲು ಆದೇಶ ನೀಡಲಾಗಿದೆ. ಈಗಾಗಲೇ ಆರು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅದರಲ್ಲಿ ನಾಲ್ಕು ಕೊಳವೆ ಬಾವಿಗಳಲ್ಲಿ ಉತ್ತಮವಾಗಿ ನೀರು ಸಿಕ್ಕಿದೆ. ಇನ್ನೂ ಹೆಚ್ಚಿನ ಕೊಳವೆ ಬಾವಿಗಳಿಗಾಗಿ ಜಿಯೊಲಾಜಿಸ್ಟ್ ಸಲಹೆ ಪಡೆಯಲಾಗಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ಸಭೆ ಕರೆಯಲಾಗಿದ್ದು, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕಡಲ್ಕೊರೆತಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು ಎಲ್ಲರಿಗೂ ತಿಳಿದಿದೆ. ಅಲ್ಲಿನ ಸಮಸ್ಯೆ ನಿಭಾಯಿಸಲು ಜಿಲ್ಲಾಡಳಿತ ಮತ್ತು ಸರಕಾರ ಎಲ್ಲಾ ರೀತಿ ಸಹಕಾರ ನೀಡುತ್ತದೆ. ಹಿಂದೆ ನಮ್ಮ ನಗರದಲ್ಲಿ ಜನವಸತಿ ಪ್ರದೇಶಗಳು ಕಡಿಮೆ ಇತ್ತು. ಇಂದು ಜನವಸತಿ ಪ್ರದೇಶಗಳು, ಜನಸಂಖ್ಯೆ ಎಲ್ಲವೂ ಅಧಿಕವಾಗಿದೆ. ಹಾಗಾಗಿ ನೀರಿನ ಬಳಕೆಯೂ ಜಾಸ್ತಿಯಾಗಿದೆ. ಆದ್ದರಿಂದ ನೀರಿನ ಸಮಸ್ಯೆಯೂ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details