ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾವರ್ಕರ್ ಫೋಟೋ ವಿವಾದ ಅಲ್ಲಲ್ಲಿ ಭುಗಿಲೆದ್ದ ಬೆನ್ನಲ್ಲೇ ಮಂಗಳೂರಿನ ಬೈಕಂಪಾಡಿಯಲ್ಲಿ ನಾಥೂರಾಮ್ ಗೋಡ್ಸೆ ಫೋಟೋ ಈಗ ವಿವಾದದ ಬೆಂಕಿಯಾಗಿದೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೈಕಂಪಾಡಿ ಜಂಕ್ಷನ್ನಲ್ಲಿ ಶುಭಾಶಯ ಕೋರಿ ಬ್ಯಾನರ್ ಅವಳಡಿಸಿದ್ದಾರೆ. ಈ ಬ್ಯಾನರ್ನಲ್ಲಿ ನಾಥೂರಾಮ್ ಗೋಡ್ಸೆ ಹಾಗೂ ಸಾವರ್ಕರ್ ಫೋಟೋ ಅಳವಡಿಸಲಾಗಿದೆ. ಅಲ್ಲದೆ ರಾಜಕೀಯವನ್ನು ಹಿಂದುತ್ವಗೊಳಿಸಿ ಹಿಂದೂಗಳನ್ನು ಸೈನಿಕೀಕರಣಗೊಳಿಸಿ ಎಂಬ ಬರಹವನ್ನೂ ಬರೆಯಲಾಗಿದೆ.