ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಕರ್ಮಲ ನಿವಾಸಿಯ ತಾಯಿ ಮತ್ತು ಮಗು ಕಾಣೆಯಾಗಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪುತ್ತೂರು: ತಾಯಿ-ಮಗು ಕಾಣೆ : ದೂರು ದಾಖಲು - ಪುತ್ತೂರು ಮಹಿಳಾ ಪೊಲೀಸ್ ಠಾಣೆ
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ತಾಯಿ ಮತ್ತು ಮಗು ಸೆ.8 ರಿಂದ ಕರ್ಮಲದ ಮನೆಯಿಂದ ಕಾಣೆಯಾಗಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕರ್ಮಲ ನಿವಾಸಿ ಅಶೋಕ ಬಿ ಎಂಬವರ ಪತ್ನಿ ಮಂಜುಳಾ(26) ಮತ್ತು ಪುತ್ರ ಸಾತ್ವಿಕ್ (ಮೂರುವರೆ ವರ್ಷ) ಕಾಣೆಯಾದವರು. ಅವರು ಸೆ.8 ರಿಂದ ಕರ್ಮಲದ ಮನೆಯಿಂದ ಕಾಣೆಯಾಗಿರುವ ಬಗ್ಗೆ ಅಶೋಕ್ ಅವರು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣೆಯಾಗುವ ಸಂದರ್ಭದಲ್ಲಿ ಮಂಜುಳಾ ಅವರು ಆಕಾಶ ನೀಲಿ ಬಣ್ಣದ ಚೂಡಿದಾರ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಸುಮಾರು 5 ಅಡಿ ಎತ್ತರವಿದ್ದಾರೆ. ಸಾತ್ವಿಕ್ ಬಿಳಿ ಮೈಬಣ್ಣ ಹೊಂದಿದ್ದು, ತುಳು ಭಾಷೆ ಮಾತನಾಡುತ್ತಾನೆ. ಇವರ ಪತ್ತೆಯಾದಲ್ಲಿ ಎಸ್‌ಪಿ ಡಿಕೆ ಮಂಗಳೂರು ದೂರವಾಣಿ ಸಂಖ್ಯೆ 0824-2220503 ನಂಬರ್ಗೆ ಕರೆ ಮಾಡಿ ತಿಳಿಸುವಂತೆ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.