ಮಂಗಳೂರು(ದಕ್ಷಿಣ ಕನ್ನಡ):ನಗರದ ಕೊಟ್ಟಾರದಲ್ಲಿ ತಡರಾತ್ರಿ ಇಬ್ಬರು ಯುವತಿಯರು ಅನ್ಯಕೋಮಿನ ಯುವಕರೊಂದಿಗೆ ಸುತ್ತಾಡುತ್ತಿರುವ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ಅವರನ್ನು ತಡೆದು ಹಲ್ಲೆಗೆ ಮುಂದಾಗಿದ್ದಾರೆ. ಹೋಟೆಲ್ಗೆ ಊಟಕ್ಕೆ ಬಂದಿರುವುದಾಗಿ ಯುವಕ, ಯುವತಿಯರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ, ಮಧ್ಯರಾತ್ರಿ ಯಾವ ಹೋಟೆಲ್ ಇದೆ ಎಂದು ಪ್ರಶ್ನಿಸಿ ಭಜರಂಗ ದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದರು. ಉರ್ವ ಠಾಣಾ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನಲ್ಲಿ ನೈತಿಕ ಪೊಲೀಸ್ಗಿರಿ: ರಾತ್ರಿ ಸುತ್ತಾಡುತ್ತಿದ್ದ ಜೋಡಿ ಮೇಲೆ ಹಲ್ಲೆ ಯತ್ನ
ಅನ್ಯಕೋಮಿನ ಜೋಡಿಯ ಮೇಲೆ ಭಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: