ಮಂಗಳೂರು :ಹ್ಯಾಂಡ್ ಲಾಕ್ ಮಾಡದೆ ನಿಲ್ಲಿಸಲಾಗಿದ್ದ ಬೈಕ್ಗಳನ್ನು ಕದ್ದು ಗುಜರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಖದೀಮರಿಬ್ಬರು ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ಶಿಯಾಬುದ್ದಿನ್ ಯಾನೆ ಶಿಯಾಬ್ ಹಾಗೂ ನಿಸಾರ್ ಬಂಧಿತ ಆರೋಪಿಗಳು. ಮೂಡುಬಿದಿರೆ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಕರ್ತವ್ಯದಲ್ಲಿದ್ದರು.
ಈ ವೇಳೆ ಮೂಡುಬಿದಿರೆ ಬಳ್ಳಾಲ್ ಹೋಟೆಲ್ ಬಳಿ ಖದೀಮರು ದ್ವಿಚಕ್ರ ವಾಹನವೊಂದನ್ನು ತಳ್ಳಿಕೊಂಡು ವಿದ್ಯಾಗಿರಿ ಕಡೆಗೆ ಹೋಗುತ್ತಿದ್ದರು. ಅನುಮಾನಗೊಂಡು ಪೊಲೀಸರು ತಡೆಯಲು ಮುಂದಾಗಿದ್ದರು. ಈ ವೇಳೆ ಆರೋಪಿಗಳು ಬೈಕ್ ಬಿಟ್ಟು ಓಡಲು ಯತ್ನಿಸಿದ್ದರು.
ತಕ್ಷಣ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವ ಬೈಕ್ ಅನ್ನು ಗುಜರಿಗೆ ಹಾಕಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ನನ್ನ ಜತೆ ಖರ್ಗೆ, ಹೆಚ್ ಡಿಕೆಯೊಂದಿಗೆ ಸಿಎಂ ಬೊಮ್ಮಾಯಿ ಮಾತಾಡಿದಾರೆ.. ಅಡ್ಡಗೋಡೆ ಮೇಲೆ ಹೆಚ್ಡಿಡಿ ದೀಪ