ಮಂಗಳೂರು: ಗ್ರಾಹಕರ ಗಮನಕ್ಕೆ ಬಾರದೇ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ ಎರಡು ಪ್ರಕರಣಗಳು ಮಂಗಳೂರಿನಲ್ಲಿ ನಡೆದಿವೆ.
ದಯಾನಂದ ಎಂಬವರು ಬೈಕಂಪಾಡಿ ಶಾಖೆಯ ಯೂನಿಯನ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು ಇವರ ಗಮನಕ್ಕೆ ಬಾರದೇ ಇವರ ಖಾತೆಯಿಂದಲೇ 20 ಸಾವಿರ ರೂ. ನಗದು ತೆಗೆದಿದ್ದಾರೆ.

ಮತ್ತೊಂದೆಡೆ ಜಾನೆಟ್ ಡಿಸೋಜ ಎಂಬವರು ಕೆನರಾ ಬ್ಯಾಂಕ್ ಬಲ್ಮಠ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು ಈ ಖಾತೆಯಲ್ಲಿದ್ದ 40 ಸಾವಿರ ರೂ ಡ್ರಾ ಮಾಡಿಕೊಂಡಿದ್ದಾರೆ.
ಇಬ್ಬರು ಬ್ಯಾಂಕ್ ಖಾತೆಯಿಂದ 60 ಸಾವಿರ ಡ್ರಾ ಮಾಡಲಾಗಿದೆ. ಈ ಬಗ್ಗೆ ಹಣ ಕಳೆದುಕೊಂಡ ಇಬ್ಬರು ಗ್ರಾಹಕರು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.