ಕರ್ನಾಟಕ

karnataka

ETV Bharat / state

ದೇವಾಲಯ ಧ್ವಂಸ ಮಾಡಲು ಹೊರಟ ಬಿಜೆಪಿ ಬಣ್ಣ ಬಯಲಾಗಿದೆ: ಹರೀಶ್ ಕುಮಾರ್

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿ ಯಾವ ಅಧಿಕಾರಿಗಳಿಗೆ ದೇವಾಲಯ ಧ್ವಂಸ ಮಾಡಲು ಧೈರ್ಯವಿದೆ. ಯಾವ ಜಿಲ್ಲಾಧಿಕಾರಿ ಗಳಿಗೆ ಧ್ವಂಸ ಮಾಡುವ ಧೈರ್ಯವಿದೆ. ಸರಕಾರದ ಪ್ರಾಯೋಜಕತ್ವದಲ್ಲಿ ಇದನ್ನು ಕೆಡವಲಾಗಿದೆ ಎಂದು ಹರೀಶ್ ಕುಮಾರ್ ಆಪಾದಿಸಿದರು.

ಮಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್​​ ಪತ್ರಿಕಾಗೋಷ್ಠಿ
ಮಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್​​ ಪತ್ರಿಕಾಗೋಷ್ಠಿ

By

Published : Sep 15, 2021, 11:50 AM IST

ಮಂಗಳೂರು: ಬಿಜೆಪಿ ಸರಕಾರ ದೇವಾಲಯಗಳನ್ನು ಧ್ವಂಸ ಮಾಡಲು ಹೊರಟಿರುವುದರಿಂದ ಆ‌ ಪಕ್ಷದ ಬಣ್ಣ ಬಯಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್​​ ಹೇಳಿದರು.

ಮಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್​​ ಪತ್ರಿಕಾಗೋಷ್ಠಿ

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ತಮ್ಮನ್ನು ಧರ್ಮರಕ್ಷಕರು, ಹಿಂದುಗಳನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿದ್ದರು. ಹಿಂದುಗಳ ಹೆಸರಿನಲ್ಲಿ, ಜನರ ಭಾವನೆ ಕೆರಳಿಸಿ ಸರಕಾರ ರಚಿಸಿ ಇದೀಗ ದೇವಾಲಯ ಧ್ವಂಸ ಮಾಡಲು ಹೊರಟಿದ್ದಾರೆ. ದೇವಾಲಯಗಳನ್ನು ಧ್ವಂಸ ಮಾಡುವ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡುವ ವೇಳೆ ಮನಕಲಕುತ್ತದೆ ಎಂದರು.

ಸರ್ಕಾರದ ಪ್ರಾಯೋಜಕತ್ವದಲ್ಲಿ ನೆಲಸಮ

ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದೇವೆ ಎಂದು ಹೇಳಿ ಇದೀಗ ಸುಪ್ರೀಂಕೋರ್ಟ್ ತೋರಿಸಿ ದೇವಾಲಯಗಳನ್ನು ಧ್ವಂಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿ ಯಾವ ಅಧಿಕಾರಿಗಳಿಗೆ ದೇವಾಲಯ ಧ್ವಂಸ ಮಾಡಲು ಧೈರ್ಯವಿದೆ. ಯಾವ ಜಿಲ್ಲಾಧಿಕಾರಿ ಗಳಿಗೆ ಧ್ವಂಸ ಮಾಡುವ ಧೈರ್ಯವಿದೆ. ಸರಕಾರದ ಪ್ರಾಯೋಜಕತ್ವದಲ್ಲಿ ಇದನ್ನು ಕೆಡವಲಾಗಿದೆ ಎಂದು ಆಪಾದಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ದೇವಾಲಯ ಧ್ವಂಸ ಮಾಡಲು ಸುಪ್ರೀಂಕೋರ್ಟ್ ಸೂಚಿಸಿದ್ದರೂ ನಮ್ಮ ಸರಕಾರ ಅದನ್ನು ಮಾಡಿಲ್ಲ. ಈ ಸರಕಾರ ಇದರ ಸೂಕ್ಷ್ಮತೆಯನ್ನು ಸುಪ್ರೀಂ ಕೋರ್ಟ್​​​ಗೆ ಮನವರಿಕೆ ಮಾಡಿ ದೇವಾಲಯ ಧ್ವಂಸ ಮಾಡುವುದನ್ನು ತಡೆಯಬೇಕು. ಈಗಾಗಲೇ ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆಯಾಚಿಸಬೇಕು ಎಂದರು.

ABOUT THE AUTHOR

...view details