ಕರ್ನಾಟಕ

karnataka

ETV Bharat / state

ಆರೋಗ್ಯ ಪೂರಕ ಜೇನು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ.. ಡಿ ವಿ ಸದಾನಂದ ಗೌಡ - ಆತ್ಮನಿರ್ಭರ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ

ಜೇನು ಉತ್ಪಾದನೆ ಇದೀಗ ಒಟ್ಟು ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ರೈತರ ಉಪಕಸುಬು ಆಗಿ ಬೆಳೆದು ಬಂದಿರುವ ಜೇನು ಕೃಷಿ ಸ್ವ ಉದ್ಯೋಗದ ಭಾಗವಾಗಿ ಆದಾಯ ಗಳಿಕೆಯ ದಾರಿಯಾಗಿದೆ. ಅಲ್ಲದೆ ಇದೀಗ ದೇಶದಲ್ಲಿ ಜೇನು ರಫ್ತು ಪ್ರಮಾಣ ಶೇ. 250ರಷ್ಟು ಹೆಚ್ಚಾಗಿದೆ..

minister-cv-sadandha-gowda-talk-about-health-supplements-honey
ಆರೋಗ್ಯ ಪೂರಕ ಜೇನು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ: ಡಿ.ವಿ. ಸದಾನಂದ ಗೌಡ

By

Published : Oct 3, 2020, 9:31 PM IST

ಪುತ್ತೂರು :ಜೇನು ಪ್ರತಿಯೊಬ್ಬರ ಆರೋಗ್ಯದೊಂದಿಗೆ ಜೋಡಣೆಯಾಗಿದೆ. ಆರೋಗ್ಯ ಪೂರಕವಾಗಿರುವ ಈ ವಸ್ತು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದರು.

ಆರೋಗ್ಯ ಪೂರಕ ಜೇನು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ.. ಡಿ ವಿ ಸದಾನಂದ ಗೌಡ

ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ವಿಸ್ತೃತ ಆಡಳಿತ ಕಚೇರಿ ಮತ್ತು ಸಭಾಭವನ 'ಮಾಧುರಿ ಸೌಧ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೇನು ಸೇವನೆಯಿಂದ ಹಲವಾರು ರೋಗಗಳಿಗೆ ಉಪಶಮನ ಪಡೆಯಲು ಸಾಧ್ಯವಿದೆ. ಜೊತೆಗೆ ಜೇನು ಹುಳುಗಳು ಪರಾಗಸ್ಪರ್ಶದ ಮೂಲಕ ಶೇ.70ರಷ್ಟು ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳನ್ನು ಹೆಚ್ಚು ಮಾಡಿ ರೈತರಿಗೆ ಆದಾಯ ಗಳಿಕೆಗೆ ಸಹಕಾರ ನೀಡುತ್ತಿದೆ.

ಜೇನು ಉತ್ಪಾದನೆ ಇದೀಗ ಒಟ್ಟು ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ರೈತರ ಉಪಕಸುಬು ಆಗಿ ಬೆಳೆದು ಬಂದಿರುವ ಜೇನು ಕೃಷಿ ಸ್ವ ಉದ್ಯೋಗದ ಭಾಗವಾಗಿ ಆದಾಯ ಗಳಿಕೆಯ ದಾರಿಯಾಗಿದೆ. ಅಲ್ಲದೆ ಇದೀಗ ದೇಶದಲ್ಲಿ ಜೇನು ರಫ್ತು ಪ್ರಮಾಣ ಶೇ. 250ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಆತ್ಮನಿರ್ಭರ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ. ವಿಶೇಷ ಅನುದಾನ ಮೀಸಲಿರಿಸಿದ್ದಾರೆ. ಸ್ವ ಉದ್ಯೋಗದೊಂದಿಗೆ ಉದ್ಯೋಗ ಸೃಷ್ಠಿಗೆ ಮೀಸಲಾಗಿರುವ ಈ ಅನುದಾನ ಸಾಮಾಜಿಕ ಸ್ಥಿತಿಯೊಂದಿಗೆ ಜೋಡಣೆಯಾಗಿದೆ. ಜನರ ಆದಾಯ ದ್ವಿಗುಣಗೊಳಿಸಲು ಎಲ್ಲಾ ಪೂರಕ ಯೋಜನೆಯನ್ನು ಪ್ರಧಾನಿಗಳು ರೂಪುಗೊಳಿಸಿದ್ದಾರೆ. ರೈತರ ಬದುಕಿಗೆ ಪೂರಕವಾಗಿರುವ ಜೇನು ಕೃಷಿಯ ಬಗ್ಗೆ ಇಲ್ಲಿನ ಯುವಕರಿಗೆ ತರಬೇತಿ ನೀಡುವುದರೊಂದಿಗೆ ಅವಕಾಶ ಸೃಷ್ಠಿಗೆ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಡಿ ವಿ ಸದಾನಂದ ಗೌಡ ಅವರು ಮಧು ಪ್ರಪಂಚ ಪತ್ರಿಕೆಯ 42ನೇ ಸಂಚಿಕೆ ಬಿಡುಗಡೆಗೊಳಿಸಿದರು. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಹಿಂದಿನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹಿರಿಯ ಜೇನು ಕೃಷಿಕರನ್ನು ಸನ್ಮಾನಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ತತ್ವಕ್ಕೆ ಬಹಳಷ್ಟು ಕೊಡುಗೆಯಿದೆ. ಸಹಕಾರ ಮನೋಭಾವ ಬೆಳವಣಿಗೆಗೆ ಪೂರಕ ಎಂದರು. ಈ ಕಾನೂನು ರೈತರ ವಿರೋಧಿಯಲ್ಲ. ಎಲ್ಲಾ ರೈತರು ಇದನ್ನು ಬೆಂಬಲಿಸಿದ್ದಾರೆ. ಆದರೆ, ರಾಜಕಾರಣದ ಉದ್ದೇಶಕ್ಕೆ ಪ್ರತಿಭಟನೆ ನಡೆಸಿ, ಇದನ್ನು ರೈತ ವಿರೋಧಿ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

ABOUT THE AUTHOR

...view details