ಕರ್ನಾಟಕ

karnataka

ETV Bharat / state

ಬೆಳ್ತಂಗಡಿ: ಎಸ್ಎಸ್ಎಲ್​ಸಿ ಪರೀಕ್ಷೆ ತಯಾರಿ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಮಾಲೋಚನಾ ಸಭೆ - ಪರೀಕ್ಷೆ ತಯಾರಿ ಬಗ್ಗೆ ಸಮಾಲೋಚನಾ ಸಭೆ

ಪ್ರತೀ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು, ಮಕ್ಕಳು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಮಾಡುವ ಮೊದಲು ಸ್ಯಾನಿಟೈಸರ್ ನೀಡುವುದು, ಥರ್ಮಲ್ ಟೆಸ್ಟ್ ಮಾಡಿಸುವುದು, ಅದಲ್ಲದೇ ಜ್ವರ ಶೀತ ಇರುವಂತಹ ಮಕ್ಕಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವಂತೆ ನಿರ್ಧರಿಸಲಾಯಿತು. ಸಾಮಾಜಿಕ ಅಂತರದಲ್ಲಿ ಒಂದು ಕೊಠಡಿಯಲ್ಲಿ 20 ಮಕ್ಕಳನ್ನು ಕುಳಿತುಕೊಳ್ಳಿಸಿ ಪರೀಕ್ಷೆ ಬರೆಸುವ ಬಗ್ಗೆ ಚರ್ಚಿಸಲಾಯಿತು.

meeting
meeting

By

Published : Jun 16, 2020, 5:38 PM IST

Updated : Jun 16, 2020, 6:46 PM IST

ಬೆಳ್ತಂಗಡಿ (ದ.ಕ.):ಲಾಕ್ ಡೌನ್​ನಿಂದ ಮುಂದೂಡಲ್ಪಟ್ಟಿದ್ದ 10ನೇ ತರಗತಿಯ ಪರೀಕ್ಷೆಯು ಇದೇ ಬರುವ ಜೂನ್​​​​ 25 ರಿಂದ ಜುಲೈ 4ರ ವರೆಗೆ ಸರ್ಕಾರದ ವಿವಿಧ ಮಾರ್ಗಸೂಚಿಯಂತೆ ನಡೆಯಲಿದ್ದು, ತಾಲೂಕಿನಲ್ಲಿ ನಡೆಯಲಿರುವ ಪರೀಕ್ಷೆಗಳ ತಯಾರಿ ಬಗ್ಗೆ ಶಾಸಕರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ಸಭೆ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆ 13 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳ ಸುರಕ್ಷತೆಯ ಬಗ್ಗೆ ಕ್ರಮ ಜರುಗಿಸಬೇಕು. ಪ್ರತೀ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು, ಮಕ್ಕಳು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಮಾಡುವ ಮೊದಲು ಸ್ಯಾನಿಟೈಸರ್ ನೀಡುವುದು, ಥರ್ಮಲ್ ಟೆಸ್ಟ್ ಮಾಡಿಸುವುದು, ಅದಲ್ಲದೇ ಜ್ವರ ಶೀತ ಇರುವಂತಹ ಮಕ್ಕಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವಂತೆ ನಿರ್ಧರಿಸಲಾಯಿತು.

ಪರೀಕ್ಷೆ ತಯಾರಿ ಬಗ್ಗೆ ಸಮಾಲೋಚನಾ ಸಭೆ

ಸಾಮಾಜಿಕ ಅಂತರದಲ್ಲಿ ಒಂದು ಕೊಠಡಿಯಲ್ಲಿ 20 ಮಕ್ಕಳನ್ನು ಕುಳಿತುಕೊಳ್ಳಿಸಿ ಪರೀಕ್ಷೆ ಬರೆಸುವ ಬಗ್ಗೆ ಚರ್ಚಿಸಲಾಯಿತು. ಪ್ರತೀ ವಿದ್ಯಾರ್ಥಿಗಳಿಗೆ ತಲಾ 3 ಸೆಟ್ ಮರುಬಳಕೆ ಮಾಡಬಹುದಾದ ಮಾಸ್ಕ್ ನೀಡುವುದು, ಹೆಚ್ಚುವರಿಯಾಗಿ ಪ್ರತೀ ಕೇಂದ್ರಗಳಿಗೆ 100 ಮಾಸ್ಕ್ ವ್ಯವಸ್ಥೆ, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾರ್ಥಿಗಳನ್ನು ಕರೆದುಕೊಂಡು ಬರಲು ಉಚಿತವಾಗಿ ಬಸ್ಸಿನ ವ್ಯವಸ್ಥೆ, ತುರ್ತು ಆರೋಗ್ಯ ಸೇವೆಗಾಗಿ ಒಂದು ಅಂಬುಲೆನ್ಸ್ ಸಿದ್ದಪಡಿಸಿ ಇಟ್ಟುಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.

ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸುರಕ್ಷತಾ ಕಿಟ್, ಆಹಾರದ ವ್ಯವಸ್ಥೆ, ಕುಡಿಯಲು ಬಿಸಿ ನೀರು, ಪ್ರತಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರದಲ್ಲಿ ಥರ್ಮಲ್ ಟೆಸ್ಟ್ ಮಾಡಿಸುವುದಕ್ಕಾಗಿ ಶಾಮಿಯಾನ, , ಶೌಚಾಲಯದ ವ್ಯವಸ್ಥೆ ಹೀಗೆ ಎಲ್ಲ ರೀತಿಯಲ್ಲೂ ಮಕ್ಕಳಿಗೆ ಗೊಂದಲ ಆಗದ ರೀತಿಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚರ್ಚಿಸಲಾಯಿತು.

ತಾಲೂಕಿನಲ್ಲಿ ನಡೆಯುವ ಹತ್ತನೇ ತರಗತಿಯ ಪರೀಕ್ಷೆಯು ಯಾವುದೇ ಗೊಂದಲ ಇಲ್ಲದೆ ನಡೆಯಬೇಕು. ಅದ್ದರಿಂದ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಬೇಕು. ಮಕ್ಕಳು ಮಾನಸಿಕವಾಗಿ ತಯಾರಾಗಲು ಶಿಕ್ಷಕರ ಪಾತ್ರ ಕೂಡ ಅತೀ ಮುಖ್ಯ ,ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಲ್ಲಾ ರೀತಿಯಲ್ಲೂ ನನ್ನ ಸಹಕಾರ ಬೆಂಬಲ ನಿಮ್ಮೊಂದಿಗೆ ಇದೆ ಎಂದು ಇಲಾಖಾಧಿಕಾರಿಗಳನ್ನು ಉದ್ದೇಶಿಸಿ ಶಾಸಕ ಹರೀಶ್ ಪೂಂಜ ಹೇಳಿದರು.

Last Updated : Jun 16, 2020, 6:46 PM IST

ABOUT THE AUTHOR

...view details