ಮಂಗಳೂರು:ಎಟಿಎಂಗೆ ಕನ್ನ ಹಾಕಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಮಂಗಳೂರು ನಗರ ಪೊಲೀಸರು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ಕೊಪ್ಪಳ ಜಿಲ್ಲೆಯ ಬಚ್ಚನಲ್ಲಿಯ ಬೀರಪ್ಪ ಬಂಧಿತ ಆರೋಪಿ. ಈತ ರಾತ್ರಿ 2 ಗಂಟೆ ಸುಮಾರಿಗೆ ಮಂಗಳೂರಿನ ತೊಕ್ಕೊಟ್ಟು ಬಳಿಯ ಬರೋಡ ಬ್ಯಾಂಕ್ನ ಎಟಿಎಂಗೆ ತೆರಳಿದ್ದಾನೆ. ಬಳಿಕ ಎಟಿಎಂ ಅನ್ನು ತೆರೆಯಲು ಪ್ರಯತ್ನಿಸಿದ್ದು, ಇದು ಬ್ಯಾಂಕ್ ಸರ್ವಿಲೆನ್ಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.