ಕರ್ನಾಟಕ

karnataka

ETV Bharat / state

ಮಂಗಳೂರು ಗಾಂಜಾ ಪ್ರಕರಣ: ಕೆಎಂಸಿಯ ಇಬ್ಬರು ವೈದ್ಯರು, 7 ವಿದ್ಯಾರ್ಥಿಗಳು ಅಮಾನತು - ವಿದ್ಯಾರ್ಥಿಗಳು ಅಮಾನತು

ಮಂಗಳೂರು ಗಾಂಜಾ ಪ್ರಕರಣ. ಆರೋಪಿಗಳಾಗಿರುವ ತಮ್ಮ ಸಂಸ್ಥೆಯ ವೈದ್ಯರನ್ನು ಮತ್ತು ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಕೆಎಂಸಿ ಡೀನ್ ಉನ್ನಿಕೃಷ್ಣನ್ ಆದೇಶಿಸಿದ್ದಾರೆ.

Representative image
ಸಾಂದರ್ಭಿಕ ಚಿತ್ರ

By

Published : Jan 20, 2023, 4:34 PM IST

Updated : Jan 20, 2023, 4:48 PM IST

ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿರುವುದು..

ಮಂಗಳೂರು: ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧಿತರಾದ 15 ಮಂದಿಯಲ್ಲಿ ಕೆಎಂಸಿ ಸಂಸ್ಥೆಯು ತನ್ನ ಸಂಸ್ಥೆಯ ಇಬ್ಬರು ವೈದ್ಯರನ್ನು ಮತ್ತು ಏಳು ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ವೈದ್ಯರುಗಳಾದ ಡಾ. ಬಾಲಾಜಿ, ಡಾ.ಶಮೀರ್, ವಿದ್ಯಾರ್ಥಿಗಳಾದ ಡಾ.ನಾದೀಯಾ ಸಿರಾಜ್, ಡಾ.ವರ್ಷಿಣಿ ಪ್ರತಿ, ಡಾ.ರಿಯಾ ಚಡ್ಡ, ಡಾ.ಕ್ಷಿತಿಜ್ ಗುಪ್ತ, ಡಾ. ಇರಾ ಬಾಸಿನ್, ಹರ್ಷ ಕುಮಾರ್ ಹಾಗೂ ಡಾ. ಕಿಶೋರಿ ಲಾಲ್ ಅಮಾನತುಗೊಂಡವರು.

ಮಂಗಳೂರಿನಲ್ಲಿ ವಾಸವಿದ್ದ ಸಾಗರೋತ್ತರ ವಿದ್ಯಾರ್ಥಿ ಯುಕೆಯ ನೀಲ್ ಕಿಶೋರಿ ಲಾಲ್ ರಾಮ್ಜಿ ಶಾ (38) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಜ.7 ರಂದು ಬಂಧಿಸಿದ್ದರು. ಈತ 2006-07ರ ಬಿಡಿಎಸ್ ವಿದ್ಯಾರ್ಥಿಯಾಗಿದ್ದು, ವೀಸಾವನ್ನು ವಿಸ್ತರಿಸಿ ಮಂಗಳೂರಿನಲ್ಲಿ ನೆಲೆ ನಿಂತಿದ್ದರು.

ಈತನಿಂದ ಗಾಂಜಾ ಪಡೆದು ಸೇವನೆ ಮಾಡುತ್ತಿದ್ದ ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಕೇರಳದ ಡಾ.ಶಮೀರ್(32), ಕೆಎಂಸಿ ಮಣಿಪಾಲದಲ್ಲಿ ಮೆಡಿಕಲ್ ಸರ್ಜನ್ ಆಗಿರುವ ತಮಿಳುನಾಡಿನ ಡಾ. ಮಣಿಮಾರನ್ ಮುತ್ತು (28), ಎಂಬಿಬಿಎಸ್ ವಿದ್ಯಾರ್ಥಿನಿ ಕೇರಳದ ಡಾ.ನಾದಿಯಾ ಸಿರಾಜ್ (24), ಆಂಧ್ರಪ್ರದೇಶ ಮೂಲದ ಡಾ.ವರ್ಷಿಣಿ ಪ್ರತಿ (26), ಕೆಎಂಸಿಯ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಪಂಜಾಬ್​​ನ ಡಾ. ರಿಯಾ ಚಡ್ಡ (22), ಕೆಎಂಸಿಯಲ್ಲಿ ಮೂರನೇ ವರ್ಷದ ಎಂಎಸ್ ಆರ್ಥೋ ವಿದ್ಯಾರ್ಥಿ ದೆಹಲಿಯ ಡಾ.ಕ್ಷಿತಿಜ್ ಗುಪ್ತ (25), ಕೆಎಂಸಿ ಮಂಗಳೂರಿನ ನಾಲ್ಕನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಪುಣೆಯ ಡಾ.ಇರಾ ಬಾಸಿನ್ (23), ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ 3ನೇ ವರ್ಷದ ಎಂಡಿ ಪಿಸಿಯಾಟ್ರಿಕ್ ವಿದ್ಯಾರ್ಥಿನಿ ಚಂಡಿಗಡದ ಡಾ.ಭಾನು ದಾಹಿಯಾ (27), ಬಂಟ್ವಾಳ ತಾಲೂಕಿನ ಮೊಹಮ್ಮದ್ ರೌಫ್ ಯಾನೆ ಗೌಸ್ (34), ಕರಾವಳಿ ಕಾಲೇಜಿನ ಫಾರ್ಮಾ ಡಿ ವಿದ್ಯಾರ್ಥಿ ಕೇರಳದ ಕೊಚ್ಚಿನ್​​ನ ಅಡೋನ್ ದೇವ್, ಕೆಎಂಸಿಯ ಅಂತಿಮ ವರ್ಷದ ಪೆಥೋಲಜಿ ವಿದ್ಯಾರ್ಥಿ ತುಮಕೂರಿನ ಹರ್ಷ ಕುಮಾರ್, ಕೆಎಂಸಿ ವೈದ್ಯ ಡಾ. ಬಾಲಾಜಿ (29), ಅನಸ್ತೇಸಿಯಾ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಡಾ. ರಾಘವ ದತ್ತಾ (28)ಮತ್ತು ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಕಸಬ ಬೆಂಗ್ರೆಯ ಮೊಹಮ್ಮದ್ ಅಫ್ರಾರ್ (23) ಎಂಬುವವರನ್ನು ಈಗಾಗಲೇ ಬಂಧಿಸಲಾಗಿದೆ.

ಇದನ್ನೂ ಓದಿ:ಗಾಂಜಾ ಸೇವನೆ ಮತ್ತು ಮಾರಾಟ.. ಇಬ್ಬರು ವೈದ್ಯರು, ಮಹಿಳಾ ಮೆಡಿಕಲ್​ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್

ಇಬ್ಬರು ವೈದ್ಯರು, 7 ವಿದ್ಯಾರ್ಥಿಗಳು ಅಮಾನತು:ಪ್ರಕರಣದಲ್ಲಿ ಒಟ್ಟು 15 ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಇಬ್ಬರು ವೈದ್ಯರು ಮತ್ತು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಕೆಎಂಸಿ ಆಸ್ಪತ್ರೆಗೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆ ಕೆಎಂಸಿ ಆಸ್ಪತ್ರೆ ತನ್ನ ಏಳು ಮಂದಿ ವಿದ್ಯಾರ್ಥಿಗಳನ್ನು ಮತ್ತು ಇಬ್ಬರು ವೈದ್ಯರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ‘'ಕೆಎಂಸಿ ಆಸ್ಪತ್ರೆಯ ಡೀನ್ ಉನ್ನಿಕೃಷ್ಣನ್ ಅವರು ಇಂದು ನನ್ನನ್ನು ಭೇಟಿಯಾಗಿ ಗಾಂಜಾ ಪ್ರಕರಣದಲ್ಲಿ ಭಾಗಿಯಾದ ತಮ್ಮ ಸಂಸ್ಥೆಯ ಏಳು ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದು ಮತ್ತು ಇಬ್ಬರು ವೈದ್ಯರ ಕಾಂಟ್ರಾಕ್ಟ್ ರಿಲೀವ್ ಮಾಡಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿರುವ ಬಗ್ಗೆ ತಿಳಿಸಿದ್ದಾರೆ. ಗಾಂಜಾ ಪ್ರಕರಣದಲ್ಲಿ ತಮ್ಮ ಸಂಸ್ಥೆ ಝೀರೋ ಟಾಲರೆನ್ಸ್ ಹೊಂದಿದೆ ಮತ್ತು ಈ ಬಗ್ಗೆ ತನಿಖೆಗೆ ಪೂರ್ಣ ಸಹಕರಿಸುವುದಾಗಿ ತಿಳಿಸಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ‘‘ ಎಂದು ತಿಳಿಸಿದರು.

ಹಲವರ ವಿಚಾರಣೆ:ಪ್ರಕರಣದಲ್ಲಿ ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದ್ದು ಹಲವರ ವಿಚಾರಣೆ ನಡೆಸುತ್ತಿದೆ. ಇಂದು ಕೂಡ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಪ್ರಮುಖ ಆರೋಪಿ ನೀಲ್ ದೆಹಲಿ, ಹೈದರಾಬಾದ್​ನಿಂದ ಗಾಂಜಾ ತಂದು ಮೂರು ಪಟ್ಟು ಬೆಲೆಗೆ ಮಾರಾಟ ಮಾಡುವುದಾಗಿ ತಿಳಿದು ಬಂದಿದೆ. ಆತನ ವೀಸಾವನ್ನು ರದ್ದು ಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಕಿಲ್ ಗೇಮ್ ಸೆಂಟರ್ ಬಂದ್: ಶಾರೀಕ್ ಪ್ರಕರಣದ ಬಳಿಕ ಪಿಜಿಗಳಲ್ಲಿ ವಾಸವಿರುವವರ ಬಗ್ಗೆ ಗಮನ ನೀಡಲಾಗುತ್ತಿದೆ. ಸ್ಕಿಲ್ ಗೇಮ್ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಸಂಘಟನೆಯೊಂದು ಸ್ಕಿಲ್ ಗೇಮ್ ಅಡ್ಡೆಗೆ ಮುತ್ತಿಗೆ ಹಾಕಿರುವ ವಿಚಾರ ತಿಳಿದು ಬಂದ ಬಳಿಕ ಆ ಸ್ಕಿಲ್ ಗೇಮ್ ಸೆಂಟರ್ ಬಂದ್ ಮಾಡಿಸಲಾಗಿದೆ ಎಂದು ಕಮಿಷನರ್​ ತಿಳಿಸಿದರು.

ಪ್ರಕರಣದ ಹಿನ್ನೆಲೆ:ಜನವರಿ 7ರಂದು ಬಿಡಿಎಸ್ ವಿದ್ಯಾರ್ಥಿ, ಯುಕೆಯ ನೀಲ್ ಕಿಶೋರ್ ಲಾಲ್ ರಾಮ್ಜಿ ಶಾ (38) ಎಂಬಾತನ ಪ್ಲಾಟ್​ಗೆ ದಾಳಿ ಮಾಡಿ ಆತನಿಂದ 2 ಕೆಜಿ ಗಾಂಜಾ, ಆಟಿಕೆ ಪಿಸ್ತೂಲ್, ಎರಡು ಮೊಬೈಲ್ ಫೋನ್​ ಮತ್ತು ಡಿಜಿಟಲ್ ತೂಕ‌ಮಾಪನ ವಶಪಡಿಸಿಕೊಳ್ಳಲಾಗಿತ್ತು. ಆತನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟದ ಮಾಹಿತಿ ಸಿಕ್ಕಿತ್ತು. ಬಳಿಕ ಮತ್ತೆ ದಾಳಿ ನಡೆಸಿ 14 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿದ್ದು, ಇವರಲ್ಲಿ ನಾಲ್ಕು ಮಂದಿ ವಿದ್ಯಾರ್ಥಿನಿಯರಾಗಿದ್ದರು. ಇವರು ಪ್ರಮುಖ ಡ್ರಗ್ ಪೆಡ್ಲರ್ ನೀಲ್ ಕಿಶೋರಿ ಲಾಲ್ ರಾಮ್ ಜಿ ಯಿಂದ ಗಾಂಜಾವನ್ನು ಪಡೆದು ಸೇವನೆ ಮತ್ತು ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ:ಗಾಂಜಾ: ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಮೂವರ ಬಂಧನ

Last Updated : Jan 20, 2023, 4:48 PM IST

ABOUT THE AUTHOR

...view details