ಕರ್ನಾಟಕ

karnataka

ETV Bharat / state

ಮಳಲಿ ಮಸೀದಿ ವಿವಾದ: ಮತ್ತೆ ಜೂನ್​ 9ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​​ - ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮಳಲಿ ಮಸೀದಿ ವಿಚಾರ

ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿಯ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಜೂನ್​​ 9ಕ್ಕೆ ಮುಂದೂಡಿಕೆಯಾಗಿದೆ.

mangaluru-court-postponed-hearing-to-may-9-in-malali-mosque-case
ಮಳಲಿ ಮಸೀದಿ ವಿವಾದ: ಮತ್ತೆ ಮೇ 9ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​​

By

Published : Jun 6, 2022, 7:26 PM IST

Updated : Jun 6, 2022, 8:30 PM IST

ಮಂಗಳೂರು:ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಮಸೀದಿ ನವೀಕರಣ ಮಾಡುವ ಸಂದರ್ಭದಲ್ಲಿ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮತ್ತೆ ಜೂನ್ 9ಕ್ಕೆ ಮುಂದೂಡಲಾಗಿದೆ.

ಏಪ್ರಿಲ್ 21ರಂದು ಮಳಲಿ ಮಸೀದಿ ಕಾಮಗಾರಿ ಸಂದರ್ಭದಲ್ಲಿ ದೇಗುಲ ಶೈಲಿ ಪತ್ತೆಯಾದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆ ವೇಳೆ ಈ ವಿಚಾರದಲ್ಲಿ ನ್ಯಾಯಾಲಯದ ವ್ಯಾಪ್ತಿ ಬಗ್ಗೆ ವಾದ - ಪ್ರತಿವಾದ ನಡೆಯಿತು.

ಇಂದು ಮಸೀದಿ ಆಡಳಿತ ಸಮಿತಿ ಪರ ವಕೀಲರು ವಾದ ಮಂಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಪರ ಅರ್ಜಿ ಸಲ್ಲಿಸಿದ ವಕೀಲರಿಗೆ ವಾದ ಮಂಡಿಸಲು ಜೂನ್ 9ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಇದನ್ನೂ ಓದಿ:ಮಂಗಳೂರು ಕಾಲೇಜಲ್ಲಿ ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಶಿಸ್ತು ಕ್ರಮದ ನೋಟಿಸ್ ಜಾರಿ

Last Updated : Jun 6, 2022, 8:30 PM IST

ABOUT THE AUTHOR

...view details