ಕರ್ನಾಟಕ

karnataka

ETV Bharat / state

ಕಳೆದು ಹೋದ ಮೊಬೈಲ್ ಶೋಧಕ್ಕೆ CIER ಉಪಕಾರಿ: ಮಂಗಳೂರಿನಲ್ಲಿ 30 ಮಂದಿಗೆ ಫೋನ್​ ಹಸ್ತಾಂತರ - ಮಂಗಳೂರು ನಗರ ಪೊಲೀಸ್ ಕಮಿಷನರೇಟ್

ಸಿಐಇಆರ್ ಪೋರ್ಟಲ್​ ಸಹಾಯ ಪಡೆದು ಮಂಗಳೂರು ಪೊಲೀಸರು ಕಳೆದುಹೋಗಿದ್ದ ಮೊಬೈಲ್​ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

mangaluru commissioner
ಪೊಲೀಸ್ ಕಮಿಷನರ್

By

Published : Mar 17, 2023, 7:03 AM IST

Updated : Mar 17, 2023, 12:33 PM IST

ವಾರಸುದಾರರಿಗೆ ಮೊಬೈಲ್​ ವಿತರಿಸಿದ ಮಂಗಳೂರು ಕಮಿಷನರ್

ಮಂಗಳೂರು: ಮೊಬೈನ್ ಫೋನ್​ಗಳ ಕಳವು ಅಥವಾ ಮಿಸ್ಸಿಂಗ್ ಸಂದರ್ಭದಲ್ಲಿ ಅದನ್ನು ಮತ್ತೆ ಪಡೆಯಲು ಜನರು ಸಾಕಷ್ಟು ಕಷ್ಟ ಪಡುತ್ತಾರೆ. ಇದೀಗ, ಸಿಐಇಆರ್ ಪೋರ್ಟಲ್​ನಲ್ಲಿ ಕಳೆದುಹೋದ ಫೋನ್​ಗಳನ್ನು ಮರಳಿ ಪಡೆಯಲು ಸುಲಭ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಅನುಕೂಲ ಪಡೆದುಕೊಂಡ 30 ಮಂದಿ ಮಂಗಳೂರಿನಲ್ಲಿ ತಮ್ಮ ಮೊಬೈಲ್ ಮರಳಿ ಪಡೆದುಕೊಂಡರು.

ಸಿಐಇಆರ್ ಪೋರ್ಟಲ್​ನಲ್ಲಿ ಸಂಪೂರ್ಣ ಮಾಹಿತಿ ದಾಖಲಿಸಿದರೆ ಪೊಲೀಸರು ಅದರ ಜಾಡು ಹಿಡಿದು ಮೊಬೈಲ್ ಫೋನ್​ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ 402 ಬ್ಲಾಕ್ ರಿಕ್ವೆಸ್ಟ್ ಬಂದಿದೆ. ಈ ಪೈಕಿ 39 ಮೊಬೈಲ್ ಫೋನ್​ಗಳನ್ನು ಜಪ್ತಿ ಮಾಡಲಾಗಿದೆ. ಅವುಗಳಲ್ಲಿ ಪತ್ತೆಯಾಗಿರುವ 30 ಮೊಬೈಲ್ ಫೋನ್​ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಅವರು ಗುರುವಾರ ವಾರಸುದಾರರಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ:ಇ - ಪೋರ್ಟಲ್​ ನೂತನ ಪ್ರಯೋಗ: 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಹು - ಧಾ ಪೊಲೀಸರು

ಕಳೆದುಹೋದ ಫೋನ್​ಗಳು ದುರುಪಯೋಗವಾಗದಂತೆ ಅವುಗಳನ್ನು ಅನ್​ಬ್ಲಾಕ್ ಮಾಡಲು ಸಿಇಐಆರ್​ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ಮೊಬೈಲ್‌ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್​ ಆ್ಯಪ್​ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.celr.gov.in) ಪೋರ್ಟಲ್‌ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೇ ಬ್ಲಾಕ್ ರಿಕ್ವೆಸ್ಟ್​ ಅನ್ನು ನೇರವಾಗಿ ಸಲ್ಲಿಸಬಹುದು. ಅಲ್ಲದೇ, ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್​ಗೆ ದೂರು ನೀಡಬಹುದು.

ಇದನ್ನೂ ಓದಿ:72 ಲಕ್ಷ ವಿಮೆ ಮೊತ್ತ ಆಸೆಗೆ ನಾಪತ್ತೆ: ಕುಟುಂಬ ರಹಸ್ಯ ಭೇದಿಸಿದ ಪೊಲೀಸರು, ಆರೋಪಿ ಬಂಧನ

ನಿನ್ನೆ ಪೊಲೀಸ್ ಕಮಿಷನರ್ ಅವರು ಸುಮಾರು 6 ರಿಂದ 7 ಲಕ್ಷ ರೂ‌. ಮೌಲ್ಯದ 30 ಫೋನ್​ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ, ಇನ್ನೂ ಸುಮಾರು 20 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್​ಗಳು ಹಸ್ತಾಂತರಕ್ಕೆ ಬಾಕಿಯಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಮಹಿಳೆ, ವೈದ್ಯೆ ಸೇರಿದಂತೆ 30 ಮಂದಿ ಕಳೆದು ಹೋದ ತಮ್ಮ ಮೊಬೈಲ್ ಫೋನ್ ಪಡೆದುಕೊಂಡರು.

ಇದನ್ನೂ ಓದಿ:UPI ವಂಚನೆ ಬಗ್ಗೆ ಇರಲಿ ಎಚ್ಚರ! ಪಿನ್​ ಸೆಟ್​ ಮಾಡುವುದಕ್ಕೆ ಅಸಡ್ಡೆ ಬೇಡ

30 ಮೊಬೈಲ್‌ ಪತ್ತೆ ಹಚ್ಚಿದ ಹು-ಧಾ ಪೊಲೀಸರು:ಮಾರ್ಚ್ 4 ರಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಇ-ಪೋರ್ಟಲ್ ಸಹಾಯ ಪಡೆದು ಸುಮಾರು ಮೂರು ಲಕ್ಷ ರೂ. ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಅವುಗಳನ್ನು ಮೊಬೈಲ್​ ಮಾಲೀಕರಿಗೆ ಹಿಂದಿರುಗಿಸಿದ್ದರು.

ಇದನ್ನೂ ಓದಿ:ಆನ್‌ಲೈನ್ ಶಾಪಿಂಗ್ ವಂಚನೆ:ಆರ್ಡರ್ ಮಾಡಿದ ಮೊಬೈಲ್ ಫೋನ್ ಬದಲಾಗಿ ಬಂತು ಡಮ್ಮಿ ಫೋನ್​, ಲೈಫ್ ಬಾಯ್ ಸೋಪ್!

Last Updated : Mar 17, 2023, 12:33 PM IST

ABOUT THE AUTHOR

...view details