ಕರ್ನಾಟಕ

karnataka

ETV Bharat / state

ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಮಂಗಳೂರು ಬೆಳೆಯಬೇಕು: ನಳಿನ್ ಕುಮಾರ್ ಕಟೀಲ್​ - ನಳಿನ್ ಕುಮಾರ್ ಕಟೀಲ್​

ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಮಂಗಳೂರು ಇನ್ನೋವೇಷನ್ ಕಾನ್ ಕ್ಲೇವ್​ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.

Innovation Conclave
ನಳಿನ್ ಕುಮಾರ್ ಕಟೀಲ್​

By

Published : Feb 24, 2021, 5:29 PM IST

ಮಂಗಳೂರು:ಉದ್ಯಮದ ಆಧಾರದಲ್ಲಿ ಮಂಗಳೂರು ಬೆಳೆದು. ಅಭಿವೃದ್ಧಿಯ ಪಥದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಆರ್ಥಿಕ ಚಲನವಲನಗಳು ಹೆಚ್ಚಾಗಬೇಕು. ಈ ಕಾರಣಕ್ಕೆ ಮಂಗಳೂರು ಪರಿವರ್ತನೆಯ ಹಾದಿಯೆಡೆಗೆ ತೆರಳಬೇಕು. ಆದರೆ, ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಮಂಗಳೂರು ಬೆಳೆಯಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್​ ಹೇಳಿದರು.

ನಗರದ ಓಶಿಯನ್ ಪರ್ಲ್ ಹೋಟೆಲ್​ ಸಭಾಂಗಣದಲ್ಲಿ ನಡೆದ ಮಂಗಳೂರು ಇನ್ನೋವೇಷನ್ ಕಾನ್​ಕ್ಲೇವ್​ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಮೂಲ ನಿವಾಸಿಗಳೇ ಕಣ್ಮರೆಯಾಗುಷ್ಟು ಮಟ್ಟಿಗೆ ಬೆಂಗಳೂರು ಬದಲಾಗಿದೆ‌. ಎಲ್ಲವನ್ನು ಮರೆತು ಹೋಗವ ಅಭಿವೃದ್ಧಿ ಮಂಗಳೂರಿಗೆ ಅಗತ್ಯವಿಲ್ಲ. ಆದ್ದರಿಂದ ಮಂಗಳೂರಿನ ಸಂಸ್ಕೃತಿ, ಪರಂಪರೆ ಜೊತೆಗೆ ಮಂಗಳೂರಿಗರು ಇದ್ದೇ ಇಲ್ಲಿನ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

ಮಂಗಳೂರು ಇನ್ನೋವೇಷನ್ ಕಾನ್​ಕ್ಲೇವ್

ಈ ಎಲ್ಲ ಕಾರಣಗಳಿಂದ ಇಂದು ಕಿಯೋನಿಕ್ಸ್ ಮುಖಾಂತರ ಎಲ್ಲಾ ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರನ್ನು ಸೇರಿಸಿ ಈ ಮಂಗಳೂರು ಇನ್ನೋವೇಷನ್ ಕಾನ್ ಕ್ಲೇವ್ ಸಭೆಯನ್ನು ಆಯೋಜಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ಸಿಂಗಲ್ ವಿಂಡೋ ಆಧಾರದಲ್ಲಿ ಎಲ್ಲ ಕೈಗಾರಿಕೋದ್ಯಮಿಗಳಿಗೆ ಒಂದೆರಡು ದಿನಗಳಲ್ಲೇ ಏಕಗವಾಕ್ಷಿ ಮೂಲಕ ನೇರವಾಗಿ ಉದ್ಯಮ ವಿಸ್ತಾರಕ್ಕೆ ಅವಕಾಶ ದೊರೆಯಬೇಕು. ಖಂಡಿತವಾಗಿ ಇದನ್ನು ಮಾಡಿಯೇ ಮಾಡುತ್ತೇನೆ. ಈ ಮೂಲಕ ಮಂಗಳೂರು ಜಗತ್ತಿಗೇ ಒಂದು ಹಬ್ ಆಗಿ ಬೆಳಕು ಚೆಲ್ಲಬೇಕು ಎಂದು ಹೇಳಿದರು.

ದ.ಕ.ಜಿಲ್ಲೆಯು ಉದ್ಯಮಶೀಲತೆ, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಸೇವೆ, ಬ್ಯಾಂಕಿಂಗ್ ವಲಯದಲ್ಲಿ ರಾಜ್ಯದಲ್ಲಿಯೇ ಎಲ್ಲ ಜಿಲ್ಲೆಗಳಿಗಿಂತ ಮುಂದೆ ಇದೆ.‌ ಪಕ್ಕದಲ್ಲಿನ ಎಲ್ಲ ಜಿಲ್ಲೆಗಳಾದ ಸಂದರ್ಭದಲ್ಲಿಯೇ ದಕ್ಷಿಣ ಕನ್ನಡವೂ ಜಿಲ್ಲೆಯಾಗಿತ್ತು. ಆದರೆ, ಅವೆಲ್ಲಕ್ಕಿಂತ ವೇಗದಿಂದ ಅಭಿವೃದ್ಧಿ ಪಥದೆಡೆಗೆ ಸಂಚರಿಸಿದ್ದರಿಂದ ಆ ಎಲ್ಲ ಜಿಲ್ಲೆಗಳು ಮಂಗಳೂರನ್ನು ಆಶ್ರಯಿಸಿದೆ ಎಂದರು.

ದ.ಕ.ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಗಳು ಹೆಚ್ಚಿರುವ ಕಾರಣ ಉದ್ಯಮಶೀಲತೆ ಹಾಗೂ ಉದ್ಯೋಗ ಈ ಎರಡನ್ನೂ ಸೃಷ್ಟಿ ಮಾಡುವ ಜವಾಬ್ದಾರಿ ನಮ್ಮಲ್ಲಿದೆ. ಬರೀ ಐಟಿ ಮಾತ್ರವಲ್ಲದೇ ಹೊಸ ಉದ್ಯಮಶೀಲತೆ ಅವಕಾಶವನ್ನು ಮಂಗಳೂರಿಗೆ ನೀಡಬೇಕು‌. ಅದಕ್ಕಾಗಿ 10 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ನಿರ್ಮಾಣ ಆಗಬೇಕಿದೆ. ಅದಕ್ಕಾಗಿ ಈಗಾಗಲೇ ಕಾರ್ಯ ಯೋಜನೆ ಮಾಡಲಾಗುತ್ತಿದೆ. ಜೊತೆಗೆ ಇಂದು ನಡೆಯುವ ಸಂವಾದದ ಆಧಾರದಲ್ಲಿ, ವಿದೇಶ ಪ್ರವಾಸ ಮಾಡಿ, ಮಂಗಳೂರು ಮಾದರಿಯ ಕಲ್ಪನೆ ಇರುವ ದೇಶಗಳಿಗೆ ಭೇಟಿ ನೀಡಿ ಜೂನ್ ತಿಂಗಳಲ್ಲಿ ದೊಡ್ಡದಾದ ಉದ್ಯಮ ಮೇಳ ಆಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

ABOUT THE AUTHOR

...view details