ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆಯನ್ನು ಇಂದಿನಿಂದ ಅದಾನಿ ಗ್ರೂಪ್ ನಡೆಸಲಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ಅದಾನಿ ತೆಕ್ಕೆಗೆ - ಮಂಗಳೂರು ಅಂತರಾಷ್ಟ್ರೀಯ ವಿಮಾನ
ಕೇಂದ್ರ ಸರ್ಕಾರ ದೇಶದ ಕೆಲವು ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದೆ. ಅದರಂತೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆಯನ್ನು ಇಂದಿನಿಂದ ಅದಾನಿ ಗ್ರೂಪ್ ಕೈಗೆತ್ತಿಕೊಂಡಿದೆ.
ಈವರೆಗೆ ಈ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ಮಾಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ದೇಶದ ಕೆಲವು ವಿಮಾನ ನಿಲ್ದಾಣಗಳ ನಿರ್ವಹಣೆ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದ್ದು, ಅದರಂತೆ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ಗೆ ವಹಿಸಿದೆ. ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡ ಅದಾನಿ ಗ್ರೂಪ್ ಇಂದಿನಿಂದ ಕಾರ್ಯಾರಂಭಿಸಿದೆ.
ಮಂಗಳೂರು ಏರ್ಪೋರ್ಟ್‌ನ ಕಸ್ಟಮ್ಸ್, ವಲಸೆ ಹಾಗೂ ಭದ್ರತಾ ವ್ಯವಸ್ಥೆಯ ವ್ಯವಹಾರ, ಸಂಪರ್ಕ ಮತ್ತು ವಿಚಕ್ಷಣ ವ್ಯವಸ್ಥೆ, ಏರ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕಾರ್ಯಗಳನ್ನು ಇದೇ ಸಂಸ್ಥೆ ನಡೆಸಲಿದೆ.