ಹುಬ್ಬಳ್ಳಿ: ಹಸೆಮಣೆ ಏರಬೇಕಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಬೂದಪ್ಪ ನವಲೂರ (28) ಕೊಲೆೆಯಾದ ವ್ಯಕ್ತಿ. ದುಷ್ಕರ್ಮಿಗಳು ತೋಟದ ಮನೆಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಬಳಿಕ ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದೆ. ತಾವರಗೇರೆ ಗ್ರಾಮದ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಜೂನ್ 7 ರಂದು ಮದುವೆ ನಡೆಯಬೇಕಿತ್ತು. ಗುರುವಾರ ಮಧ್ಯರಾತ್ರಿ ಕೊಲೆ ನಡೆದಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದು:ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ ಪತ್ನಿ- ಶಂಕೆ: ಮೂವರ ಬಂಧನ ಪೊಲೀಸರಿಂದ ತನಿಖೆ
ವ್ಯಕ್ತಿಯ ಬರ್ಬರ ಹತ್ಯೆ:ರಾತ್ರಿ ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇತ್ತೀಚೆಗೆ ಕಲಬುರಗಿಯ ಭರತ್ ನಗರ ತಾಂಡಾದಲ್ಲಿ ನಡೆದಿತ್ತು. ಲಕ್ಷ್ಮಣ ಚವ್ಹಾಣ (50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಲಕ್ಷ್ಮಣ ಚವ್ಹಾಣ ಕಳೆದ ಕೆಲ ವರ್ಷಗಳಿಂದ ಪ್ಯಾರೆಲೇಸಿಸ್ ಅಟ್ಯಾಕ್ ಆಗಿದ್ದರಿಂದ ನಡೆದಾಡಲು ಆಗ್ತಿರಲಿಲ್ಲ. ಆದರೂ ಕುಳಿತುಕೊಂಡು ಸರಿದಾಡುತ್ತಲೇ ಕೊಂಚ ದೂರದವರೆಗೆ ಹೋಗುತ್ತಿದ್ದರು. ಮೃತ ಲಕ್ಷ್ಮಣ ಸಹೋದರನ ಮಗನ ಮದುವೆ ಸಂಭ್ರಮ ಮನೆಯಲ್ಲಿ ಕಳೆಗಟ್ಟಿತ್ತು.
ಇದನ್ನೂ ಓದಿ:Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ