ಕರ್ನಾಟಕ

karnataka

ETV Bharat / state

ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ನ್ಯಾಯಾಂಗ ಬಂಧನ - ಸುಳ್ಳದಲ್ಲಿ ಅತ್ಯಾಚಾರ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಸಂಬಂಧ ಆರೋಪಿಗೆ ನ್ಯಾಯಂಗ ಬಂಧನದಲ್ಲಿ ಇಡಲಾಗಿದೆ.

Bellare Police Station
ಬೆಳ್ಳಾರೆ ಪೊಲೀಸ್ ಠಾಣೆ

By

Published : Sep 30, 2021, 6:34 AM IST

ಸುಳ್ಯ:ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬಸ್​ನಿಂದ ಇಳಿದು ಯುವತಿಯೊಬ್ಬಳು ಮನೆ ಕಡೆಗೆ ತೆರಳುತ್ತಿದ್ದಳು. ಈ ವೇಳೆ ಸ್ಥಳೀಯ ನಿವಾಸಿ ಗಣೇಶ್ ಎಂಬಾತ ಆಕೆಯ ಮೈ ಮೇಲೆ ಕೈ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದನು. ಅಲ್ಲದೇ ಯುವತಿ ಹೊತ್ತುಕೊಂಡು ಹೋಗಲು ಮುಂದಾಗಿದ್ದನು.

ಬಳಿಕ ಆರೋಪಿಯಿಂದ ತಪ್ಪಿಸಿಕೊಂಡ ಯುವತಿ, ಪಕ್ಕದಲ್ಲೇ ವಾಸವಾಗಿದ್ದ ತನ್ನ ಮಾವನನ್ನು ಕೂಗಿ ಕರೆದಿದ್ದಳು. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಘಟನೆ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕರು, ಸಂಸದರ ಜೊತೆ ಇಂದು ಸಿಎಂ ಬೊಮ್ಮಾಯಿ ಸಭೆ

ABOUT THE AUTHOR

...view details