ಮಂಗಳೂರು: ಶ್ರೀಮಂತ ವಿವಾಹಿತ ಮಹಿಳೆಯೊಂದಿಗೆ ಪ್ರೇಮದ ನಾಟಕವಾಡಿ ಲೈಂಗಿಕ ಸಂಪರ್ಕ ಬೆಳೆಸಿ 1.5 ಕೋಟಿ ವಂಚನೆ ಮಾಡಿದ್ದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಬೈರಿಕಟ್ಟೆಯ ನಿವಾಸಿ ಫಯಾಜ್(30) ಬಂಧಿತ ಆರೋಪಿ.
ಆರೋಪಿ ಫಯಾಜ್ ಸಂತ್ರಸ್ತ ಮಹಿಳೆ ಜೊತೆಗೆ 2012ರಲ್ಲಿಯೇ ಪರಿಚಿತನಾಗಿದ್ದು, ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಮಹಿಳೆಯ ಮೂವರು ಮಕ್ಕಳಲ್ಲಿ, ಇಬ್ಬರು ವಿಶೇಷ ಚೇತನರಾಗಿದ್ದರು. ಆರೋಪಿ ಫಯಾಜ್ ಅವರ ಮೇಲೆ ಕರುಣೆ ತೋರಿಸುವಂತೆ, ಮಕ್ಕಳನ್ನು ಶಾಲೆಗೆ ಕರೆದೊಯ್ಯವಂತೆ, ಇನ್ನಿತರ ಸಹಕಾರ ನೀಡುವಂತೆ ನಾಟಕವಾಡುತ್ತಿದ್ದ. ಮಹಿಳೆಯ ಗಂಡ ಉದ್ಯಮಿಯಾಗಿದ್ದು, ಶ್ರೀಮಂತರಾಗಿದ್ದರು.