ಮಂಗಳೂರು :ಲಾಕ್ಡೌನ್ ಬಳಿಕ ಶೈಕ್ಷಣಿಕ ಸಂಸ್ಥೆಗಳು ಇನ್ನೂ ಪ್ರಾರಂಭವಾಗಿಲ್ಲ. ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗುವ ಬಗ್ಗೆ ಅನಿಶ್ಚಿತತೆ ಇರುವ ನಡುವೆ ಕೆಲವು ಶಿಕ್ಷಣ ಸಂಸ್ಥೆಗಳು ಆನ್ಲೈನ್ ಕ್ಲಾಸ್ ಆರಂಭಿಸಿವೆ. ಇದರಿಂದಾಗಿ ಲ್ಯಾಪ್ಟಾಪ್, ಕಂಪ್ಯೂಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕೊರೊನಾ ಹಿನ್ನೆಯಲ್ಲಿ ಶಾಲೆಗಳು, ಕಾಲೇಜುಗಳಲ್ಲಿ ಪಾಠ ಮಾಡೋಕೆ ಅವಕಾಶ ಇಲ್ಲದೇ ಇರುವುದರಿಂದ ಸಾಕಷ್ಟು ವಿದ್ಯಾಸಂಸ್ಥೆಗಳು ಈಗಾಗಲೇ ಆನ್ಲೈನ್ ಕ್ಲಾಸ್ಗಳ ಮೊರೆಹೋಗಿವೆ. ಇದು ಒಂದೆಡೆಯಾದ್ರೆ ಮತ್ತೊಂದೆಡೆ ಆನ್ಲೈನ್ ಪಾಠ ಕೇಳೋಕೆ ಬೇಕಾಗಿರೋ ಲ್ಯಾಪ್ಟಾಪ್ ಹಾಗೂ ಕಂಪ್ಯೂಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಕೆಲವರಿಗೆ ಮಾರುಕಟ್ಟೆಯಲ್ಲಿ ಲ್ಯಾಪ್ಟಾಪ್ ಹಾಗೂ ಕಂಪ್ಯೂಟರ್ಗಳಿಗೆ ಕೊರತೆಯಾಗಿದೆ.