ಕರ್ನಾಟಕ

karnataka

ETV Bharat / state

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿ ಕಾರಣ: ಸಚಿವ ಖಾದರ್ - Bangalore

ಕೆಂಪೇಗೌಡರಲ್ಲಿದ್ದ ದೂರದೃಷ್ಟಿಯೇ ಈಗಿನ ಬೆಂಗಳೂರು ಅಭಿವೃದ್ಧಿಗೆ ಕಾರಣವೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಟ್ಟಿದ್ದಾರೆ.

ಮಂಗಳೂರು

By

Published : Jun 27, 2019, 7:52 PM IST

ಮಂಗಳೂರು: ಕೆಂಪೇಗೌಡರಲ್ಲಿದ್ದ ದೂರದೃಷ್ಟಿಯೇ ಈಗಿನ ಬೆಂಗಳೂರು ಅಭಿವೃದ್ಧಿಗೆ ಕಾರಣವೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಟ್ಟಿದ್ದಾರೆ.

ದ.ಕ‌. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಮಂಗಳೂರು ವಿವಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಮಾತನಾಡಿದರು. ಇಂದು ಬೆಂಗಳೂರಿನಲ್ಲಿರುವ ವೃತ್ತಿ ಆಧಾರಿತವಾದ ಅಕ್ಕಿಪೇಟೆ, ಬಳೇಪೇಟೆ, ಚಿಕ್ಕಪೇಟೆ ಇವೆಲ್ಲವೂ ಕೆಂಪೇಗೌಡರ ದೂರದೃಷ್ಟಿಯ ಉದಾಹರಣೆ. ಅಲ್ಲದೆ ಬೆಂಗಳೂರು ಬಹಳ ಎತ್ತರವಾದ ಪ್ರದೇಶದಲ್ಲಿದ್ದು, ಕೆಳಗಿನಿಂದ ನೀರು ಸರಬರಾಜು ಮಾಡಲು ಕಷ್ಟ ಎಂಬ ಕಾರಣಕ್ಕೆ ಅಲ್ಲಲ್ಲಿ ಬಹಳಷ್ಟು ಕೆರೆಗಳ ನಿರ್ಮಾಣ ಮಾಡಿ ಬೆಂಗಳೂರನ್ನು ಕೆರೆಗಳ ನಗರವನ್ನಾಗಿ ಮಾಡಿದ್ದು ಕೆಂಪೇಗೌಡರ ಆಲೋಚನೆಯಿಂದಲೇ ಎಂದರು.

ಮಂಗಳೂರಲ್ಲಿ ಕೆಂಪೇಗೌಡರ ಜಯಂತಿ ಆಚರಣೆ
ಯಾರು ಇತಿಹಾಸವನ್ನು ತಿಳಿದುಕೊಳ್ಳುತ್ತಾನೋ ಅವನು ಇತಿಹಾಸ ನಿರ್ಮಾಣ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಲವಾರು ಜಯಂತಿಗಳನ್ನು ಆಚರಿಸುತ್ತಾ ಬರುತ್ತಿದೆ. ಹಾಗಾಗಿ ಯಾರು ಯಾವ ಸ್ಥಾನಕ್ಕಾದರೂ ಏರಿ. ಆದರೆ ಇತಿಹಾಸವನ್ನು ನಿರ್ಮಾಣ ಮಾಡಿ ಅದರ ಮೂಲಕ ಉತ್ತಮ ಸಮಾಜ ಕಟ್ಟಲು ಕೈಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ABOUT THE AUTHOR

...view details