ಪುತ್ತೂರು :ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‌ನ ಸಹಯೋಗದೊಂದಿಗೆ ನಗರದ ದರ್ಬೆಯಲ್ಲಿ ಆರಂಭವಾದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು.
ದೇಶದ ಜನರ ವಿಶ್ವಾಸ ಗಳಿಸುವಲ್ಲಿ ಜನೌಷಧಿ ಯಶಸ್ವಿ.. ಡಾ. ಕಲ್ಲಡ್ಕ ಪ್ರಭಾಕರ್
ಜನೌಷಧಿಯು ಬಳಕೆಗೆ ಬಂದ ಬಳಿಕ ಜನಸಾಮಾನ್ಯರಿಗೆ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳು ಕೈಗೆಟಕುವ ದರದಲ್ಲಿ ಲಭ್ಯವಾದವು. ಇಂದು ದೇಶದ ಜನರ ವಿಶ್ವಾಸ ಗಳಿಸುವಲ್ಲಿ ಜನೌಷಧಿ ಯಶಸ್ವಿಯಾಗಿದೆ..
ಈ ವೇಳೆ ಮಾತನಾಡಿದ ಕಲ್ಲಡ್ಕ್ ಪ್ರಭಾಕರ್ ಭಟ್, ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಸಂದರೂ ಅಲೋಪತಿ ಔಷಧೀಯ ಉತ್ಪಾದನೆ ಮತ್ತು ಮಾರಾಟದಲ್ಲಿ ಬ್ರಾಂಡೆಡ್ ಕಂಪನಿಗಳಿಗೆ ಪರ್ಯಾಯವಾಗಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ದೊರೆಯಬೇಕೆಂಬ ಚಿಂತನೆ ನಡೆದಿರಲಿಲ್ಲ. ಮೋದಿಯವರ `ಸಬ್ ಕೆ ಸಾಥ್ ಸಬ್ ಕಾ ವಿಕಾಸ್' ಚಿಂತನೆಯ ಕಾರಣದಿಂದಾಗಿ, ಸ್ವದೇಶಿ ಕಲ್ಪನೆಯಿಂದಾಗಿ ಜನೌಷಧಿ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಯು ಅನುಷ್ಠಾನಕ್ಕೆ ಬಂತು ಎಂದರು. ಜನೌಷಧಿಯು ಬಳಕೆಗೆ ಬಂದ ಬಳಿಕ ಜನಸಾಮಾನ್ಯರಿಗೆ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳು ಕೈಗೆಟಕುವ ದರದಲ್ಲಿ ಲಭ್ಯವಾದವು. ಇಂದು ದೇಶದ ಜನರ ವಿಶ್ವಾಸ ಗಳಿಸುವಲ್ಲಿ ಜನೌಷಧಿ ಯಶಸ್ವಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ. ಅನಿಲಾ ದೀಪಕ್, ಭಾರತೀಯ ಜನೌಷಧಿ ಕೇಂದ್ರಗಳ ಜಾಲದಲ್ಲಿ ರಾಜ್ಯದಲ್ಲಿಯೇ ದ.ಕ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಮುಂದಿನ ತಿಂಗಳು 15 ಮಳಿಗೆಗಳು ಜಿಲ್ಲೆಯಲ್ಲಿ ಆರಂಭವಾಗಲಿವೆ. ಜನೌಷಧಿ ಕೇಂದ್ರಗಳನ್ನು ತೆರೆಯಲು ಆಸಕ್ತರು ಮುಂದೆ ಬರುತ್ತಿದ್ದಾರೆ. ಜನೌಷಧಿ ವ್ಯವಸ್ಥೆಯ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರವು 900 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಮೂಲಕ ಜನೌಷಧಿ ಇನ್ನಷ್ಟು ಜನಸಾಮಾನ್ಯರ ಹತ್ತಿರ ಬರುವಂತೆ ಮಾಡಲಿದೆ ಎಂದು ತಿಳಿಸಿದ್ರು.