ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ಆರು ತಿಂಗಳ ಕಾಲ ಉಳಿಯುವುದಿಲ್ಲ: ಐವನ್ ಡಿಸೋಜ ಭವಿಷ್ಯ - B. S. Yediyurappa

ಇಂದಿನ ಈ ಸರ್ಕಾರ 2008 ರಿಂದ 2013ರ ಸರ್ಕಾರದ ಹಾದಿಯಲ್ಲಿದೆ ಎಂದು ಪ್ರಾರಂಭದಲ್ಲೇ ತೋರಿಸಿಕೊಟ್ಟಿದೆ. ಶಾಸಕರಾದ ರೇಣುಕಾಚಾರ್ಯ, ಅಂಗಾರ ಮತ್ತು ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ ಅತೃಪ್ತರಾಗಿದ್ದಾರೆ. ಸಿ‌.ಟಿ.ರವಿ ಈಗಾಗಲೇ ಕಾರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಸಿ‌.ಟಿ. ರವಿಯವರ ಹಾದಿಯನ್ನು ತುಳಿಯಿರಿ ಎಂದು ಐವನ್ ಡಿಸೋಜ ಹೇಳಿದ್ದಾರೆ.

ಐವನ್ ಡಿಸೋಜ

By

Published : Aug 27, 2019, 3:22 PM IST

ಮಂಗಳೂರು:ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದ್ದು, ಅದು ಸಿ.ಟಿ. ರವಿಯಿಂದ ಪ್ರಾರಂಭವಾಗಿದೆ. ಇದು ಹೊಸ ದಿಕ್ಕೊಂದನ್ನು ಪಡೆಯಲಿದೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ, ಸರ್ಕಾರ ಆರು ತಿಂಗಳು ಸಹ ಬಾಳುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಐವನ್ ಡಿಸೋಜ

ನಗರದ ಮಲ್ಲಿಕಟ್ಟೆಯಲ್ಲಿರುವ ದ‌.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಸಚಿವರ ಹೆಸರು ಘೋಷಣೆ ಆಗಿವೆ. ಚರಿತ್ರೆಯಲ್ಲಿಯೇ ಮೊದಲ ಮೂರು ಮಂದಿ ಉಪಮುಖ್ಯಮಂತ್ರಿಗಳು ಆಯ್ಕೆಯಾಗಿದ್ದಾರೆ. ಸಚಿವರ ಆಯ್ಕೆಗೆ ದೆಹಲಿಯಿಂದ ಆದೇಶ ಬಂದ್ರೆ, ಖಾತೆಗೆ ಯಾರಾಗಬೇಕೆಂದು ನಾಗಪುರದಿಂದ ಆದೇಶ ಬಂತು. ದೆಹಲಿ ಮತ್ತು ನಾಗಪುರ ಹೋರಾಟದಿಂದ ಹೈಕಮಾಂಡ್​ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದರು.

ಇಂದಿನ ಈ ಸರ್ಕಾರ 2008 ರಿಂದ 2013ರ ಅವಧಿಯಲ್ಲಿದ್ದ ಸರ್ಕಾರದಂತಿದೆ ಎಂದು ಪ್ರಾರಂಭದಲ್ಲೇ ತೋರಿಸಿಕೊಟ್ಟಿದೆ. ಶಾಸಕರಾದ ರೇಣುಕಾಚಾರ್ಯ, ಅಂಗಾರ ಮತ್ತು ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ ಅತೃಪ್ತರಾಗಿದ್ದಾರೆ. ಸಿ‌.ಟಿ.ರವಿ ಈಗಾಗಲೇ ಕಾರನ್ನು ಹಿಂದಕ್ಕೆ ಕಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಸಿ‌.ಟಿ. ರವಿಯವರನ್ನು ಬೆಂಬಲಿಸಿ ಎಂದು ಐವನ್ ಡಿಸೋಜ ಸವಾಲು ಹಾಕಿದರು.

ಯಡಿಯೂರಪ್ಪ ಆ್ಯಂಡ್ ಸನ್ಸ್ ಎಲ್ಲಾ ರೀತಿಯ ವರ್ಗಾವಣೆಯಲ್ಲಿ ಭಾಗವಹಿಸಿದ್ದಾರೆ. ಇದು ಜನಪರ ಸರ್ಕಾರ ಅಲ್ಲ. ಜನ ವಿರೋಧಿ ಸರ್ಕಾರ ಆಗುತ್ತದೆ ಎಂದು ಒಂದು ತಿಂಗಳ ಅವಧಿಯಲ್ಲೇ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈ ಸರ್ಕಾರ ಜನಪರ ಆಗಿದ್ದರೆ ರಾಜ್ಯದಲ್ಲಿ ಭೀಕರ ನೆರೆ ಬಂದು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಅದಕ್ಕೆ ಏನಾದರೂ ಕೆಲಸ ಮಾಡಬೇಕಿತ್ತು. 26 ಸಂಸದರು, 5 ಜನ ಸಚಿವರಿದ್ದು, ಇಂದಿನವರೆಗೆ 5 ಪೈಸೆ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ABOUT THE AUTHOR

...view details