ಮಂಗಳೂರು:ನಗರದಲ್ಲಿ 4ನೇ ದಿನವೂ ಐಟಿ ದಾಳಿ ಮುಂದುವರೆದಿದ್ದು, ಇಂದು ಕೂಡ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಶಾಸಕ ಯು.ಟಿ.ಖಾದರ್ ಅವರ ಸಹೋದರ ಇಫ್ತಿಕಾರ್ ಮನೆ ಮೇಲೆ ಐಟಿ ದಾಳಿ ನಡೆದಿದ್ದಾಗ ಅವರು ವಿದೇಶಿ ಪ್ರವಾಸದಲ್ಲಿದ್ದು, ಇಲ್ಲಿಯವರೆಗೂ ಅವರು ಮರಳಿ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಅವರು ಬರುವವರೆಗೆ ಐಟಿ ಅಧಿಕಾರಿಗಳು ತಪಾಸಣೆ ಮುಂದುವರೆಸಲಿದ್ದಾರೆ ಎನ್ನಲಾಗ್ತಿದೆ.
ಎ.ಜೆ.ಗ್ರೂಪ್ ಮಾಲೀಕ ಎ.ಜೆ.ಶೆಟ್ಟಿ, ಯೆನೆಪೊಯ ಅಬ್ದುಲ್ಲಾ ಕುಂಞಿ, ಶ್ರೀನಿವಾಸ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಟ್ ಮಾಲೀಕ ಶ್ರೀನಿವಾಸ ರಾವ್, ಕಣಚೂರು ಗ್ರೂಪ್ ಆಫ್ ಮಾಲೀಕ ಕಣಚೂರು ಮೋನು ಅವರಿಗೆ ಸೇರಿರುವ ಮನೆ, ಕಚೇರಿ, ಆಸ್ಪತ್ರೆ ಸಂಸ್ಥೆಗಳ ಮೇಲಿನ ಐಟಿ ಅಧಿಕಾರಿಗಳ ದಾಳಿ ಬಳಿಕ ಪರಿಶೀಲನೆ ಮುಂದುವರೆದಿದೆ. ಅಲ್ಲದೇ ಅವರ ನಿಕಟವರ್ತಿಗಳ ಮನೆ, ಕಚೇರಿಗಳ ಮೇಲೆಯೂ ದಾಳಿ ನಡೆಸಿರುವ ಐಟಿ ಇಲಾಖೆ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ.
ಓದಿ:ಕಡಲನಗರಿಯಲ್ಲಿ ಮುಂದುವರೆದ ಐಟಿ ದಾಳಿ: ಶಾಸಕ ಖಾದರ್ ಸಹೋದರ ಮನೆ ಮೇಲೆ ರೈಡ್