ಕರ್ನಾಟಕ

karnataka

By

Published : Oct 21, 2020, 12:06 PM IST

ETV Bharat / state

ಹಿಂದಿನ ಕಾಂಗ್ರೆಸ್​​ ಸರ್ಕಾರದ ನಿರ್ಲಕ್ಷ್ಯದಿಂದ ಕಾಮಗಾರಿಗಳು ಬಾಕಿ: ಪ್ರೇಮಾನಂದ ‌ಶೆಟ್ಟಿ

ಮಂಗಳೂರು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆಗಳಿಗೆ ಬೇಕಾದ ಹಣವನ್ನು ಕ್ರೋಢೀಕರಿಸುವ ಕೆಲಸ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಹಾಗಾಗಿ ಕದ್ರಿ ಹಾಗೂ ಕಂಕನಾಡಿ ಮಾರುಕಟ್ಟೆಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ‌ ಎಂದು ಮಂಗಳೂರು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.

infrastructure-lack-due-to-negligence-of-previous-congress-govt-premananda-shetty
ಹಿಂದಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಕಾಮಗಾರಿಗಳು ಬಾಕಿ: ಪ್ರೇಮಾನಂದ ‌ಶೆಟ್ಟಿ

ಮಂಗಳೂರು:ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆಗಳಿಗೆ ಬೇಕಾದ ಹಣವನ್ನು ಕ್ರೋಢೀಕರಿಸುವ ಕೆಲಸ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಹಾಗಾಗಿ ಕದ್ರಿ ಹಾಗೂ ಕಂಕನಾಡಿ ಮಾರುಕಟ್ಟೆಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ‌ ಎಂದು ಮಂಗಳೂರು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಕಾಮಗಾರಿಗಳು ಬಾಕಿ: ಪ್ರೇಮಾನಂದ ‌ಶೆಟ್ಟಿ

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ. ಹಿಂದಿನ ಸಾರ್ಕಾರದ ನಿರ್ಲಕ್ಷ್ಯದಿಂದಾಗಿ ಹಣ ಬಾರದ ಕಾರಣ ಕದ್ರಿ ಹಾಗೂ ಕಂಕನಾಡಿ ಎರಡೂ ಮಾರುಕಟ್ಟೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರರು ಸ್ವಲ್ಪ ಕಾಮಗಾರಿ ನಡೆಸಿ ಬಿಲ್ ನೀಡುತ್ತಾರೆ. ಆದರೆ ಇದೀಗ ಬಿಜೆಪಿ ಸರ್ಕಾರ ಕೆಎಫ್​ಡಿಸಿಯಿಂದ ಶೇ. 70ರಷ್ಟು ಸಾಲ ಮಂಜೂರಾತಿ ಪಡೆದಿದ್ದು, ಶೇ. 30ರಷ್ಟು ತಮ್ಮದೇ ನಿಧಿಯಿಂದ ಭರಿಸುವುದಾಗಿ ಮೇಯರ್ ಅವರ ಮೊದಲ ಕೌನ್ಸಿಲ್​​ನಲ್ಲಿ ಮಂಜೂರಾತಿ ಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿರುವ ತೊಡಕುಗಳನ್ನು ನಿವಾರಣೆ ಮಾಡಿ ಕಾಮಗಾರಿಯ ಸೌಲಭ್ಯಗಳು ಶೀಘ್ರವಾಗಿ ಸಾರ್ವಜನಿಕರಿಗೆ ದೊರಕಬೇಕು ಎಂದು ಬಿಜೆಪಿ ಪ್ರಯತ್ನ ಪಡುತ್ತಿದೆ.

ಶಾಸಕ ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಲಭ್ಯವಾದ ಹಣದಿಂದ 30 ಲಕ್ಷ ರೂಪಾಯಿಯನ್ನು ವಿನಿಯೋಗಿಸಿ ಮಾರುಕಟ್ಟೆಯನ್ನು ಪೂರ್ಣಗೊಳಿಸಿದ್ದಾರೆ‌‌ ಎಂದು ಪ್ರೇಮಾನಂದ ಶೆಟ್ಟಿ ತಿಳಿಸಿದರು.

ABOUT THE AUTHOR

...view details