ಕರ್ನಾಟಕ

karnataka

ETV Bharat / state

ಸಿಎಂ ‌ಬದಲಾವಣೆ ಬಗ್ಗೆ ಈವರೆಗೆ ನನಗೆ ಯಾವುದೇ ಮಾಹಿತಿ ಇಲ್ಲ: ನಳಿನ್ ಕುಮಾರ್ ಕಟೀಲ್ - nalin kumar kateel meets George Fernandes

ಸಿಎಂ ‌ಬದಲಾವಣೆ ಬಗ್ಗೆ ನನಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ, ಹೀಗಾಗಿ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

George Fernandes
ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

By

Published : Jul 25, 2021, 10:11 PM IST

ಮಂಗಳೂರು: ಸಿಎಂ ‌ಬದಲಾವಣೆ ಬಗ್ಗೆ ನನಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಉಲ್ಲೇಖ ಮಾಡೋಕೆ ಹೋಗೋದಿಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ‌.

ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಅನಾರೋಗ್ಯದಿಂದ ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಕಾದು ನೋಡಿ ಅಂತ ಯಾವ ಭಾವನೆ, ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಸಿಎಂ ಆಗಿ ಇಂದು ಯಡಿಯೂರಪ್ಪನವರು ಎರಡನೇ ವರ್ಷವನ್ನು ಪೂರೈಸಿದ್ದಾರೆ.‌ಬಹಳ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ.‌ ನೆರೆ, ಕೋವಿಡ್ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ‌. ಆರ್ಥಿಕ ಹೊಡೆತದ ಮಧ್ಯೆಯೂ ಒಳ್ಳೆಯ ಯೋಜನೆಗಳು ಪ್ರಕಟವಾಗಿದೆ. ಈ ಹೊತ್ತಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ನಾಳೆ ರಾಜ್ಯಪಾಲರ ಭೇಟಿ ಮಾಡಲಿರುವ ಸಿಎಂ: ಹೈಕಮಾಂಡ್​​ನಿಂದ ಬಂತಾ ಸೂಚನೆ?

ಪಕ್ಷ ಹೇಳುವುದನ್ನು ಪಾಲಿಸುತ್ತೇನೆ ಎನ್ನುವ ಮೂಲಕ ಯಡಿಯೂರಪ್ಪನವರು ಕಾರ್ಯಕರ್ತರಾದ ನಮಗೆಲ್ಲಾ ಆದರ್ಶರಾಗಿದ್ದಾರೆ. ರಾಷ್ಟ್ರ ಮತ್ತು ಪಕ್ಷದ ಮಾತಿಗೆ ಗೌರವ ಕೊಟ್ಟು ನಡೆದುಕೊಂಡು ಹೋಗೋದು ಕಾರ್ಯಕರ್ತರಿಗೆ ಪ್ರೇರಣೆ. ಈ ದೃಷ್ಟಿಯಿಂದ ಪಕ್ಷ ಹೇಳಿದ್ರೆ ಯಾವುದಕ್ಕೂ ಸಿದ್ಧ ಅಂತಾ ಹೇಳಿದ್ದಾರೆ. ಇದು ಯಡಿಯೂರಪ್ಪನವರ ಮಾತು ಮತ್ತು ನಮ್ಮ ಮಾತು ಕೂಡ ಇದೆ ಆಗಿದೆ. ನಾನು ನಾಳೆ ಅಧಿವೇಶನದ ಹಿನ್ನೆಲೆ ದೆಹಲಿಗೆ ಹೋಗ್ತಾ ಇದ್ದೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯ ನಿನ್ನೆಗಿಂತ ಇಂದು ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಆದಷ್ಟು ಶೀಘ್ರ ಗುಣಮುಖರಾಗಿ ರಾಜ್ಯಸಭೆಯಲ್ಲಿ ಅವರ ಮಾರ್ಗದರ್ಶನ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದನ್ನೂ ಓದಿ:ನಾಳೆ ಎಂದಿನ ದಿನಚರಿ ನಿಗದಿ.. ವಿದಾಯ ಭಾಷಣಕ್ಕೆ ಸಿದ್ಧರಾದ್ರಾ ಯಡಿಯೂರಪ್ಪ?

ABOUT THE AUTHOR

...view details