ಮಂಗಳೂರು: ಕೋಸ್ಟ್ ಗಾರ್ಡ್ಗೆ ನೀಡಲಾದ ಜಾಗದಲ್ಲಿದ್ದ ಗೋಶಾಲೆಯನ್ನು ಇತ್ತೀಚಿಗೆ ಧ್ವಂಸ ಮಾಡಿದ ಹಿನ್ನೆಲೆ, ಗೋವುಗಳಿಗೆ ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಒಂದು ಲಕ್ಷ ರೂ. ಚೆಕ್ ವಿತರಿಸಿದರು.
ಬಜ್ಪೆ ಕೆಂಜಾರಿನಲ್ಲಿ ಪ್ರಕಾಶ್ ಶೆಟ್ಟಿ ಎಂಬವರು ಸುಮಾರು 300 ಕಪಿಲ ತಳಿಯ ಗೋವುಗಳನ್ನು ಸಾಕುತ್ತಿದ್ದು, ಈ ಗೋಶಾಲೆ ಧ್ವಂಸ ಮಾಡಲಾಗಿತ್ತು. ಇತ್ತೀಚಿಗೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದರು. ಇಂದು ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕೆ ಒಂದು ಲಕ್ಷ ರೂ. ಚೆಕ್ ಅನ್ನು ಪ್ರಕಾಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.