ದಕ್ಷಿಣ ಕನ್ನಡ:ಅರಣ್ಯ ವೀಕ್ಷಕರೊಬ್ಬರು ಆಯತಪ್ಪಿ ಹೊಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಸಮೀಪದ ತೊಡಿಕಾನ ಎಂಬಲ್ಲಿ ನಡೆದಿದೆ.
ಹೊಳೆಗೆ ಆಯತಪ್ಪಿ ಬಿದ್ದ ಅರಣ್ಯ ವೀಕ್ಷಕ ಸಾವು..
ಚಿನ್ನಪ್ಪ ಎಂಬ ಅರಣ್ಯ ವೀಕ್ಷಕ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳುಮೊಟ್ಟೆಯ ಹೊಳೆಯಲ್ಲಿ ನೀರು ಕುಡಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.
ಅರಣ್ಯ ವೀಕ್ಷಕ ಚಿನ್ನಪ್ಪ
ಮೃತರು ಕೊಡಗು ಜಿಲ್ಲೆಯ ಅರಣ್ಯ ವೀಕ್ಷಕ ಚಿನ್ನಪ್ಪ (58 ವರ್ಷ ) ಎಂದು ಗುರುತಿಸಲಾಗಿದೆ. ಕೊಡಗಿನ ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋಗಿದ್ದ ಚಿನ್ನಪ್ಪ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳುಮೊಟ್ಟೆಯ ಹೊಳೆ ಬದಿಯಲ್ಲಿ ನೀರು ಕುಡಿಯಲು ತೆರಳಿದ್ದರು. ಈ ವೇಳೆ ಆಯತಪ್ಪಿ ಹೊಳೆಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಅನುಸರಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬರುತ್ತಿದ್ದಂತೆ ಮಗ ಸಾವು
Last Updated : Nov 9, 2022, 4:20 PM IST