ಮಂಗಳೂರು: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ 'ಇವಿಎಂ ತೊಲಗಿಸಿ ಮತ ಪತ್ರ ಬಳಸಿ' ಆಂದೋಲನವು ಇಂದು ನಗರದ ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗ ನಡೆಯಿತು.
ಮಹಿಳಾ ಕಾಂಗ್ರೆಸ್ನಿಂದ 'ಇವಿಎಂ ತೊಲಗಿಸಿ' ಆಂದೋಲನ - kannadanews
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ನಗರದಲ್ಲಿ 'ಇವಿಎಂ ತೊಲಗಿಸಿ ಮತ ಪತ್ರ ಬಳಸಿ' ಆಂದೋಲನ ನಡೆಸಲಾಯ್ತು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ನ ಸದಸ್ಯೆಯರು ಇವಿಎಂ ತೊಲಗಿಸಬೇಕೆಂದು ಪತ್ರಗಳನ್ನು ಬರೆದು ಪೋಸ್ಟ್ ಬಾಕ್ಸ್ ಮುಖಾಂತರ ರಾಷ್ಟ್ರಪತಿ ಭವನಕ್ಕೆ ರವಾನಿಸಿದರು. ಈ ವೇಳೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇವಿಎಂನ್ನು ತೊಲಗಿಸಿ, ಬ್ಯಾಲೆಟ್ ಪೇಪರ್ ಮುಖಾಂತರವೇ ಚುನಾವಣೆ ನಡೆಸಬೇಕೆಂದು ರಾಷ್ಟ್ರಪತಿಗಳಿಗೆ ನಮ್ಮ ಬೇಡಿಕೆಗಳನ್ನು ಅಂಚೆ ಪತ್ರಗಳ ಮುಖಾಂತರ ಬರೆದು ರಾಷ್ಟ್ರಪತಿ ಭವನಕ್ಕೆ ಪೋಸ್ಟ್ ಮಾಡುತ್ತಿದ್ದೇವೆ ಎಂದ್ರು. ಇಂದು ಏಕಕಾಲದಲ್ಲಿ ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್ಗಳನ್ನು ರಾಷ್ಟ್ರಪತಿ ಭವನಕ್ಕೆ ಪೋಸ್ಟ್ ಮಾಡುತ್ತಿದ್ದೇವೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೊದಲಿನಿಂದ ಇರುವ ಬ್ಯಾಲೆಟ್ ಪೇಪರ್ ಚುನಾವಣೆಯೇ ಇರಲಿ ಎಂದು ಈ ಆಂದೋಲನ ನಡೆಸುತ್ತಿದ್ದೇವೆ ಎಂದ್ರು.
ಈ ನಮ್ಮ ಬೇಡಿಕೆಗೆ ಚುನಾವಣಾ ಆಯುಕ್ತರು, ಕೇಂದ್ರ ಸರ್ಕಾರ ಶೀಘ್ರವಾಗಿ ಸ್ಪಂದಿಸುವ ಮುಖಾಂತರ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಇವಿಎಂ ಮೂಲಕ ಸುಲಭದಲ್ಲಿ ಮತಗಳನ್ನು ಹ್ಯಾಕ್ ಮಾಡಬಹುದು. ಮುಂದುವರಿದ ರಾಷ್ಟ್ರವಾದ ಅಮೆರಿಕ ಕೂಡ ಚುನಾವಣೆಗೆ ಇವಿಎಂ ಬಳಸದೆ ಬ್ಯಾಲೆಟ್ ಪೇಪರ್ ಅವಲಂಬಿಸಿದೆ. ಆದ್ದರಿಂದ ಭಾರತದಲ್ಲಿ ಸೂಕ್ತ ಅಭ್ಯರ್ಥಿ ಚುನಾವಣೆಯಲ್ಲಿ ಜಯ ಕಾಣಬೇಕಾದರೆ ಬ್ಯಾಲೆಟ್ ಪೇಪರ್ ಸೂಕ್ತ ಮಾರ್ಗ ಎಂದು ಪಿಂಟೊ ಹೇಳಿದ್ರು.