ಕರ್ನಾಟಕ

karnataka

ETV Bharat / state

ಸುಬ್ರಹ್ಮಣ್ಯ: ಹಾಡಹಗಲೇ ಮನೆ ಅಂಗಳದಲ್ಲಿ ಸಂಚರಿಸಿದ ಕಾಡಾನೆ, ಭಯಭೀತರಾದ ಜನತೆ

ಸುಬ್ರಹ್ಮಣ್ಯ ಅರಣ್ಯ ವಲಯದ ಕೊಣಾಜೆ ಗ್ರಾ.ಪಂ‌ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆಗಳು ರಾತ್ರಿ ಹಾಗು ಹಗಲಿನಲ್ಲೂ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.

Elephant destroys crop at Subramanya
ಸುಬ್ರಹ್ಮಣ್ಯದಲ್ಲಿ ಕಾಡಾನೆ ದಾಳಿ

By

Published : Nov 23, 2021, 9:37 PM IST

ಸುಬ್ರಹ್ಮಣ್ಯ:ಕಾಡಾನೆಯೊಂದು ಹಾಡಹಗಲೇ ಮನೆ ಅಂಗಳಕ್ಕೆ ಹಾಗೂ ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಭೀತಿಗೊಳಿಸಿರುವ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.


ಸುಬ್ರಹ್ಮಣ್ಯ ಅರಣ್ಯ ವಲಯದ ಕಡ್ಯ ಕೊಣಾಜೆ ಗ್ರಾ.ಪಂ‌ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆಗಳು ರಾತ್ರಿ ಹಾಗು ಹಗಲಿನಲ್ಲೂ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.


ರವಿಪ್ರಸಾದ್ ಭಟ್ ಗುಜ್ಜಲ, ನರಸಿಂಹ ಭಟ್ ಪೆರಡೆ, ಮಧುಸೂದನ್ ಭಟ್ ಕಡ್ಯ, ನಾಗರಾಜ್ ಭಟ್ ಕಡ್ಯ, ರವೀಂದ್ರ ಬತ್ತಿಲ್ ಹಾಗೂ ಇತರರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ, ಇತರೆ ಬೆಳೆಗಳನ್ನು ನಾಶಪಡಿಸಿದೆ.


ಕಾಡಾನೆ ಉಪಟಳದಿಂದಾಗಿ ಜನತೆ ಹಗಲಲ್ಲೂ ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಸೂಕ್ತ ಕೆಲಸ ಸಿಕ್ಕಿಲ್ಲ ಎಂದು ಕೊಳ್ಳೇಗಾಲದಲ್ಲಿ M. Com ಪದವೀಧರ ಆತ್ಮಹತ್ಯೆ

ABOUT THE AUTHOR

...view details