ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಅಧಿಕಾರ ವಹಿಸಿದ ಕೂಡಲೇ ಬಿಸಿ ಮುಟ್ಟಿಸಿದ ನೂತನ ಪೊಲೀಸ್ ಆಯುಕ್ತರು

ನಗರದ ನೆಹರೂ ಮೈದಾನದ ಬಳಿ ನಡೆದುಕೊಂಡು ಹೋಗುತ್ತಿರುವಾಗಲೇ ಮದ್ಯಪಾನ ಮಾಡುತ್ತಿದ್ದ ಯುವಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Dakshina kannada News
ಮಂಗಳೂರಿನಲ್ಲಿ ಅಧಿಕಾರ ವಹಿಸಿದ ಕೂಡಲೇ ಬಿಸಿ ಮುಟ್ಟಿಸಿದ ನೂತನ ಪೊಲೀಸ್ ಆಯುಕ್ತರು

By

Published : Jan 4, 2021, 7:11 AM IST

ಮಂಗಳೂರು: ನಗರದ ನೂತನ ಪೊಲೀಸ್ ಆಯುಕ್ತರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಯುವಕರಿಗೆ ಬಿಸಿ ಮುಟ್ಟಿಸಿ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಈ ಬಗ್ಗೆ ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಪಾಂಡೇಶ್ವರ ಹಾಗೂ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡುವ ಬಗ್ಗೆ ಸಾರ್ವಜನಿಕ ರಿಂದ ಸಾಕಷ್ಟು ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿಗಳಾದ ವಿನಯ್ ಗಾಂವ್ಕರ್ ಹಾಗೂ ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ 100 ಕ್ಕೂ ಅಧಿಕ ಮಂದಿ ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದರು.

ವಶಕ್ಕೆ ಪಡೆದವರಲ್ಲಿ ಸಾಕಷ್ಟು ಮಂದಿ ಮದ್ಯದ ನಶೆಯಲ್ಲಿದ್ದಾರೆ. ಈ ಬಗ್ಗೆ ವಿಡಿಯೋಗಳನ್ನು ಮಾಡಲಾಗಿದೆ. ವಶಕ್ಕೆ ಪಡೆದವರಲ್ಲಿ ಕ್ರಿಮಿನಲ್ ಹಿನ್ನೆಲೆ ಇದೆಯೇ ಎಂದು ತನಿಖೆ ನಡೆಸಿ ಆ ಬಳಿಕ ಅವರ ಪೋಷಕರನ್ನು ಪತ್ತೆಹಚ್ಚಿ ಅವರ ಸುಪರ್ದಿಗೆ ನೀಡಲಿದ್ದೇವೆ. ಈ ಪ್ರಕ್ರಿಯೆಯಲ್ಲಿ 10-12 ಮಂದಿ ಮಂಗಳಮುಖಿಯರೂ ಸಿಕ್ಕಿಬಿದ್ದಿದ್ದಾರೆ. ಅವರಿಗೂ ಮಧ್ಯರಾತ್ರಿ ಹೊತ್ತು ಅಡ್ಡಾಡಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ಇದನ್ನು ವಾರದಲ್ಲಿ ಎರಡು ಅಥವಾ ಮೂರು ದಿವಸಗಳ ಕಾಲ ಒಂದೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತದೆ‌. ಮೊದಲ ದಿನವಾದ್ದರಿಂದ ಇಂದು ಎಲ್ಲರನ್ನೂ ಬಿಟ್ಟು ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಲ್ಲಿ ವಶಕ್ಕೆ ಪಡೆದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details