ಕರ್ನಾಟಕ

karnataka

ETV Bharat / state

ಮಂಗಳೂರು: ಲಾಡ್ಜ್​​​ನಲ್ಲಿ ಕೇರಳದ ದಂಪತಿ ಆತ್ಮಹತ್ಯೆ - ಕಣ್ಣೂರಿನ ತಳಿಪರಂಬದ ದಂಪತಿ

ಕಣ್ಣೂರಿನ ತಳಿಪರಂಬದ ನಿವಾಸಿಗಳಾದ ಪತಿ, ಪತ್ನಿ ಮಂಗಳೂರಿನ ಲಾಡ್ಜ್​​ವೊಂದರಲ್ಲಿ ಆತ್ಮಹತ್ಯೆಗ ಶರಣಾಗಿದ್ದಾರೆ.

ಹೋಟೆಲ್ ನ್ಯೂ ಬ್ಲೂ ಸ್ಟಾರ್ ಲಾಡ್ಜ್​​
ಹೋಟೆಲ್ ನ್ಯೂ ಬ್ಲೂ ಸ್ಟಾರ್ ಲಾಡ್ಜ್​​

By

Published : Feb 8, 2023, 5:13 PM IST

ದಂಪತಿ ಆತ್ಮಹತ್ಯೆ ಪ್ರಕರಣ

ಮಂಗಳೂರು: ನಗರದ ಲಾಡ್ಜ್​​ನಲ್ಲಿ ಕೇರಳದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣೂರು ಜಿಲ್ಲೆಯ ರವೀಂದ್ರನ್ (55) ಮತ್ತು ಸುಧಾ (50) ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಳಿಪರಂಬದ ನಿವಾಸಿಗಳಾದ ಇವರು ಫೆಬ್ರವರಿ 6ರಂದು ಮಂಗಳೂರಿಗೆ ಬಂದಿದ್ದರು. ನಗರದ ಫಳ್ನೀರ್​​ನ ಹೋಟೆಲ್ ನ್ಯೂ ಬ್ಲೂ ಸ್ಟಾರ್ ಲಾಡ್ಜ್​​ನಲ್ಲಿ ಆಧಾರ್ ಕಾರ್ಡ್ ದಾಖಲೆ ನೀಡಿ ರೂಂ ಪಡೆದಿದ್ದರು ಎಂದು ಗೊತ್ತಾಗಿದೆ.

ನಿನ್ನೆಯಿಂದ ದಂಪತಿ ರೂಂ ಹೊರ ಬಾರದಿರುವುದನ್ನು ಗಮನಿಸಿದ ಸಿಬ್ಬಂದಿ ಇಂದು ಅವರನ್ನು ಕರೆದಿದ್ದಾರೆ. ಯಾವುದೇ ಉತ್ತರ ಬಾರದೇ ಇದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪಂಚರ ಸಮಕ್ಷಮದಲ್ಲಿ ಬಾಗಿಲು ಒಡೆದಿದ್ದಾರೆ. ಆಗ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಘಟನಾ ಸ್ಥಳದಲ್ಲಿ ವಿಪರೀತ ವಾಸನೆ ಬರುತ್ತಿತ್ತು. ಫೆಬ್ರವರಿ 6 ರಂದೇ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಡೆತ್‌ನೋಟ್ ಲಭ್ಯವಾಗಿಲ್ಲ. ಸ್ಥಳಕ್ಕೆ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಡಿಸಿಪಿ ಅಂಶುಕುಮಾರ್, ಎಸಿಪಿ ಮಹೇಶ್ ಕುಮಾರ್, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ: ಅಪಹರಿಸಿ ಕೊಲೆ ಮಾಡಿರುವ ಆರೋಪ

ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ, "ಫಳ್ನೀರ್​​ನ ಹೋಟೆಲ್ ನ್ಯೂ ಬ್ಲೂ ಸ್ಟಾರ್ ಲಾಡ್ಜ್ ನಲ್ಲಿ 6ನೇ ತಾರೀಖಿನಂದು ಸುಮಾರು 11 ಗಂಟೆ ಹೊತ್ತಿಗೆ ಒಬ್ಬ ಗಂಡಸು ಹಾಗೂ ಹೆಂಗಸು ಬಂದಿದ್ದಾರೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಅವರಿಬ್ಬರು ದಂಪತಿ ಎಂದು ಗೊತ್ತಾಗಿದೆ. 55 ವಯಸ್ಸಿನ ಪುರುಷ ಹಾಗೂ 50 ವಯಸ್ಸಿನ ಮಹಿಳೆ ಎಂದು ತಿಳಿದುಬಂದಿದೆ. ರವೀಂದ್ರ ಹಾಗೂ ಸುಧಾ ಎಂಬುವವರು ಆಧಾರ್ ಕಾರ್ಡ್​ ಪ್ರೂಫ್‌ ಕೊಟ್ಟು ರೂಂ​ ತೆಗೆದುಕೊಂಡಿದ್ದಾರೆ."

ಇದನ್ನೂ ಓದಿ :ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ.. ಬೆಂಗಳೂರಲ್ಲಿ ತಾತನಿಗೆ 20 ವರ್ಷ ಶಿಕ್ಷೆ ಆದೇಶ

"ಆ ದಿನ ಅಲ್ಲಿ ಕೆಲಸ ಮಾಡುವವರು 6ನೇ ತಾರೀಖಿನ ರಾತ್ರಿ ಅವರನ್ನು ಕಂಡಿದ್ದಾರೆ. ಅದಾದ ನಂತರ ಅವರು ನೋಡಿಲ್ಲ. ಇವತ್ತು ಬೆಳಗ್ಗೆ ಕೂಡಾ ಮಾತನಾಡಿಸಲು ಟ್ರೈ ಮಾಡಿದ್ದಾರೆ. ಆಗಲೂ ಕೂಡಾ ಯಾರೂ ರೆಸ್ಪಾಂಡ್ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪಂಚರ ಸಮಕ್ಷಮದಲ್ಲಿ ಬಾಗಿಲು ಒಡೆದ ಸಂದರ್ಭದಲ್ಲಿ ನೇಣು ಬಿಗಿದ ರೀತಿ ಶವ ಕಂಡುಬಂದಿದೆ. ಅವರ ಕುಟುಂಬದವರಿಗೂ ಮಾಹಿತಿ ತಿಳಿಸಲಾಗಿದೆ. ಸದ್ಯದ ಮಾಹಿತಿಯಂತೆ, ಇವರು ಕೇರಳದ ಕಣ್ಣೂರಿನವರು. ಹೋಟೆಲ್​ಗೆ ನೀಡಿರುವ ದಾಖಲೆಗಳ ಆಧಾರದಲ್ಲಿ ಕೇರಳದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅವರ ಮೂಲಕ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರವೀಂದ್ರನ್ ಬಟ್ಟೆ ವ್ಯಾಪಾರಿ. ಇವರ ಕುಟುಂಬಿಕರು ಮಂಗಳೂರಿಗೆ ಬರುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಆತ್ಮಹತ್ಯೆ ಗೆ ಕಾರಣವೂ ತಿಳಿದುಬಂದಿಲ್ಲ" ಎಂದರು.

ಇದನ್ನೂ ಓದಿ:ಮೈಸೂರು: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ

ABOUT THE AUTHOR

...view details