ಕರ್ನಾಟಕ

karnataka

ETV Bharat / state

ಜನಸಾಮಾನ್ಯರ ತೆರಿಗೆ ಹಣದಿಂದ ದೇಶ ನಡೆಸುತ್ತೇವೆ ಎನ್ನುವುದು ಬಿಜೆಪಿ‌ ಸರ್ಕಾರದ ಮೂರ್ಖತನ; ಯು.ಟಿ.ಖಾದರ್ - ಯು.ಟಿ.ಖಾದರ್

ಕೇಂದ್ರ ಸರ್ಕಾರದ  ಕಾಯ್ದೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತಿರುವ ನೂತನ ಮೋಟಾರು ವಾಹನ‌ ಮತ್ತು ರಸ್ತೆ ಸುರಕ್ಷತಾ ಕಾಯ್ದೆಯಿಂದ ಜನ ಸಾಮಾನ್ಯರಿಗೆ ಕಿರುಕುಳ ಹಾಗೂ ಸಾಮಾಜಿಕ ಸಮಸ್ಯೆಯಾಗುತ್ತಿದೆ ಎಂದು ಶಾಸಕ ಖಾದರ್​​ ತಿಳಿಸಿದ್ದಾರೆ.

ಯು.ಟಿ.ಖಾದರ್

By

Published : Sep 11, 2019, 4:00 AM IST

ಮಂಗಳೂರು: ಕೇಂದ್ರ ಸರ್ಕಾರದ ಕಾಯ್ದೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತಿರುವ ನೂತನ ಮೋಟಾರು ವಾಹನ‌ ಮತ್ತು ರಸ್ತೆ ಸುರಕ್ಷತಾ ಕಾಯ್ದೆಯಿಂದ ಜನ ಸಾಮಾನ್ಯರಿಗೆ ಕಿರುಕುಳ ಹಾಗೂ ಸಾಮಾಜಿಕ ಸಮಸ್ಯೆಯಾಗುತ್ತಿದೆಶಾಸಕ ಯು.ಟಿ. ಖಾದರ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಟೀಕಿಸಿದ್ದಾರೆ.

ಜನಸಾಮಾನ್ಯರ ತೆರಿಗೆ ಹಣದಿಂದಲೇ ದೇಶವನ್ನು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದರೆ ಅದು ಮೂರ್ಖತನದ ಪರಮಾವಧಿ ಎಂದಿರುವ ಖಾದರ್ ಎಲ್ಲರೂ ಕಾನೂನುಬದ್ಧವಾಗಿ ಇರಬೇಕು ಸರಿ‌. ಆದರೆ ಅದಕ್ಕೆ ದಂಡದ ಮೂಲಕವೇ ಪರಿಹಾರ ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಯು.ಟಿ.ಖಾದರ್

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ನೂತನ ವಾಹನ ದಂಡ ಕಾಯ್ದೆಯಿಂದ ಜನಸಾಮಾನ್ಯರಿಗೆ ತೊಂದರೆ ಯಾಗುತ್ತಿದೆ. ಆದ್ದರಿಂದ ಕನಿಷ್ಠ ಆರು ತಿಂಗಳಾದರೂ ಇದನ್ನು ಮುಂದಕ್ಕೆ ಹಾಕಲಿ. ಬಳಿಕ ಈ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿ, ಜನಜಾಗೃತಿ ಮೂಡಿಸಿ, ಜನರಿಗಾಗುವ ತೊಂದರೆಯನ್ನು ಸರಿಪಡಿಸಿ ಶಿಸ್ತುಬದ್ಧವಾದ ವಾಹನ ಚಲಾಯಿಸುವ ವಾತಾವರಣ ನಿರ್ಮಿಸಲಿ ಎಂದು ಸ್ಪಷ್ಟಪಡಿಸಿದರು.

ನಾವು ಪಾಕಿಸ್ತಾನದೊಂದಿಗೆ ಯುದ್ಧಮಾಡುತ್ತೇವೆ, ಪಾಕಿಸ್ತಾನವನ್ನು ಬಿಡುವುದಿಲ್ಲ ಎಂಬ ಬಿಜೆಪಿಗರು ಇಂದು ಅವರ ವಿರುದ್ಧ ಯುದ್ಧ ಮಾಡುವುದಲ್ಲ, ಇಂತಹ ಜನವಿರೋಧಿ ಕಾನೂನುಗಳನ್ನು ಅನುಷ್ಠಾನಗೊಳಿಸಿ ನಮ್ಮ ದೇಶದ ಜನರೊಂದಿಗೆ ಯುದ್ಧ ಮಾಡುತ್ತಿದ್ದಾರೆ. ಪಾಕಿಸ್ತಾನದಿಂದ ನುಸುಳುವಿಕೆಗೆ ದಿಟ್ಟ ಕ್ರಮ ಕೈಗೊಳ್ಳಲು ಇನ್ನೂ ಕೂಡಾ ಬಿಜೆಪಿ ಸಕಾ್ರಕ್ಕೆ ಸಾಧ್ಯವಾಗಿಲ್ಲ. ಅಲ್ಲದೆ ಪಾಕಿಸ್ತಾನವನ್ನು ಹದ್ದುಬಸ್ತಿನಲ್ಲಿಡುವ ಒಂದೇ ಒಂದು ಕಾರ್ಯ ಆಗಿಲ್ಲ. ಅವರು ಮತ್ತೆ ಮತ್ತೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೆ ಅವರನ್ನು ಮಟ್ಟಹಾಕುವುದು ಬಿಟ್ಟು ಇಂತಹ ಜನವಿರೋಧಿ ಕಾನೂನುಗಳನ್ನು ಅನುಷ್ಠಾನ ಗೊಳಿಸಿ ದೇಶದ ಜನತೆಯನ್ನೇ ವೈರಿಗಳ ಹಾಗೆ ನೋಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಅಮೇರಿಕಾ, ದುಬೈಗಳಲ್ಲಿರುವ ಕಾನೂನುಗಳನ್ನು ಇಲ್ಲಿ ಅನುಷ್ಠಾನ ಗೊಳಿಸುವ ಪ್ರಯತ್ನ ದಲ್ಲಿದೆ ಬಿಜೆಪಿ ಸರ್ಕಾರ. ಆದರೆ ಅಲ್ಲಿಯ ಹಣದ ಬೆಲೆಗೂ ಇಲ್ಲಿನ ಬೆಲೆಗೂ ಸಾಕಷ್ಟು ಅಂತರವಿದೆ. ಅದನ್ನು ಸರಿದೂಗಿಸಿ ಬಳಿಕ ಇಂತಹ ಕಾನೂನುಗಳನ್ನು ಅನುಷ್ಠಾನಗೊಳಿಸಲಿ. ಬಿಜೆಪಿಯವರದ್ದು ಬಾಯಿಯಲ್ಲಿ ಸ್ವದೇಶಿ ನೀತಿ, ವೃತ್ತಿಯಲ್ಲಿ ವಿದೇಶಿ ತಂತ್ರ. ಇವರ ಇಂತಹ ಅಧಿಕ ಮೊತ್ತದ ದಂಡ ವಸೂಲಾತಿಯ ಪರಿಣಾಮ ಯುವಕರು ಅಪರಾಧಿ ಕೃತ್ಯಗಳಿಗೆ ತೊಡಗುವುದು ಖಂಡಿತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details