ಮಂಗಳೂರು (ದ.ಕ):ಕೊರೊನಾ ವಾರಿಯರ್ಗಳಾಗಿ ಶ್ರಮಿಸಿದ ಉಳ್ಳಾಲ ಪೊಲೀಸ್ ಠಾಣೆಯ ಆರು ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ದಾಖಲಾಗದೆ ಚಡಪಡಿಸಿದ ಘಟನೆ ನಡೆದಿದೆ.
ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ: ಠಾಣೆಯಲ್ಲಿ ಕಾದು ಕುಳಿತ ಸಿಬ್ಬಂದಿ - Corona Latest News
ಉಳ್ಳಾಲ ಪೊಲೀಸ್ ಠಾಣೆಯ ಆರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗಿದೆ. ವಿಷಯ ತಿಳಿದು ಉಪ ಪೊಲೀಸ್ ಆಯುಕ್ತ ಅರುಣಾಂಗ್ಶುಗಿರಿ ಅವರು ಸೋಂಕಿತ ಪೊಲೀಸರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು
ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಕೊಂಡೊಯ್ಯದೆ ನಿರ್ಲಕ್ಷ್ಯ: ಠಾಣೆಯಲ್ಲೇ ಕಾದು ಕುಳಿತ ವಾರಿಯರ್ಸ್
ಇಂದು ಬಂದ ಗಂಟಲು ದ್ರವ ತಪಾಸಣಾ ವರದಿಯಲ್ಲಿ ಠಾಣೆಯ ಆರು ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿತು. ಸೋಂಕಿತ ಪೊಲೀಸರನ್ನು ಕರೆದೊಯ್ಯಲು ಆರೋಗ್ಯ ಇಲಾಖೆಯ ಸಿಬ್ಬಂದಿ ತಡವಾಗಿ ಬಂದಿದ್ದರಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಪೊಲೀಸ್ ಕ್ವಾಟ್ರಸ್ ಹಾಗೂ ಠಾಣೆಯಲ್ಲಿ ಕಾಯಬೇಕಾಯಿತು.
ಸಂಜೆಯಾದರೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಾರದ ಇರುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದಿತು. ಉಪ ಪೊಲೀಸ್ ಆಯುಕ್ತ ಅರುಣಾಂಗ್ಶುಗಿರಿ ಅವರು 6 ಮಂದಿ ಸೋಂಕಿತ ಪೊಲೀಸರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.