ಉಳ್ಳಾಲ:ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೊನಾ ದೂರವಾಗುತ್ತದೆ ಎಂದು ಹೇಳಿದ್ದ ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆದೇಶದವರೆಗೆ ತೆಗೆದು ಹಾಕಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಆದೇಶ ಹೊರಡಿಸಿದೆ.
ಉಳ್ಳಾಲ: ಪಕ್ಷ ವಿರೋಧಿ ಚಟುವಟಿಕೆ, ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ಅಮಾನತು - ETv Bharat Kannada news
ಕೊರೊನಾಕ್ಕೆ ರಮ್ ಮದ್ದು ಎಂದಿದ್ದ ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಅವರನ್ನು ಕೈ ಪಕ್ಷದಿಂದ ಅಮಾನತು ಮಾಡಲಾಗಿದೆ.
ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಪಕ್ಷದಿಂದ ಅಮಾನತು
ಇವರು ಸಾರ್ವಜನಿಕ ಸ್ಥಳಗಳಲ್ಲಿ ಪಾನಮತ್ತರಾಗಿ ಮೈಮೇಲಿನ ಬಟ್ಟೆಗಳನ್ನೂ ಕಳಚಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಇತ್ತೀಚೆಗೆ ನಡೆದ ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಂದೂ ಸಭೆಯಲ್ಲಿ ಭಾಗವಹಿಸದೇ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡಿ ಪಕ್ಷದ ತತ್ವ ಸಿದ್ಧಾಂತಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜೀನಾಮೆ ನೀಡಿದ್ದ ಐವರು ಗುಜರಾತ್ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿದ ಕಾಂಗ್ರೆಸ್