ಕರ್ನಾಟಕ

karnataka

ETV Bharat / state

ಕುಕ್ಕೆ ಆಡಳಿತ ಕಚೇರಿಯಲ್ಲಿ ಮಾರಾಮಾರಿ: ಅರ್ಚಕರ ಮೇಲೆ ಹಲ್ಲೆ ಆರೋಪ

ಘಟನೆಯಲ್ಲಿ ಹಲ್ಲೆಗೊಳಗಾದ ಅರ್ಚಕ ಕುಮಾರ್ ಬನ್ನಿಂತಾಯರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀ ಮಠದಲ್ಲಿ ಅರ್ಚಕರಾಗಿರುವ ಕುಮಾರ್ ಬನ್ನಿಂತಾಯರು ಸುಮಾರು 5 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

ಕುಕ್ಕೆ ಆಡಳಿತ ಕಚೇರಿಯಲ್ಲಿ ಮಾರಾಮಾರಿ

By

Published : Jun 2, 2019, 11:44 AM IST

ಮಂಗಳೂರು:ಇತಿಹಾಸ ಪ್ರಸಿದ್ಧಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತ ಕಚೇರಿಯಲ್ಲಿ ಮಾರಾಮಾರಿ ಪ್ರಕರಣ ನಡೆದಿದ್ದು, ಅರ್ಚಕರಿಗೆ ಮರಣಾತಿಕ ಹಲ್ಲೆ ನಡೆಸಿದ ಆರೋಪ‌ ಕೇಳಿ ಬಂದಿದೆ.

ಕುಮಾರ್ ಬನ್ನಿಂತಾಯ (61) ಹಲ್ಲೆಗೊಳಗಾದವರು.

ನಿನ್ನೆ ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಅರ್ಚಕ ಕುಮಾರ್ ಬನ್ನಿಂತಾಯರು ದೇವಸ್ಥಾನದ ಮುಂದೆ ಇರುವ ಮಠಕ್ಕೆ ಬರುವ ಭಕ್ತಾದಿಗಳ ಜೊತೆಗೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಗುರುಪ್ರಸಾದ್ ಪಂಜ, ಪ್ರಶಾಂತ್ ಮಾಣಿಲ ಎಂಬವವರು ಅವರನ್ನು ಕಚೇರಿಗೆ ಎಳೆದುಕೊಂಡು ಹೋಗಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹೇಶ್ ಕರಿಕಳ ಜೊತೆ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡಿಸಿದ್ದಾರೆಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಅರ್ಚಕರು

ಹಲ್ಲೆಗೊಳಗಾದ ಕುಮಾರ್ ಬನ್ನಿಂತಾಯರು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಮಠದಲ್ಲಿ ಅರ್ಚಕರಾಗಿರುವ ಕುಮಾರ್ ಬನ್ನಿಂತಾಯರು ಸುಮಾರು 5 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

ABOUT THE AUTHOR

...view details