ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡದಲ್ಲಿ ಸಿಟಿ ಬಸ್​ ಎಗರಿಸಿದ್ದ ಭೂಪ ಕೊನೆಗೂ ಸಿಕ್ಕಿಬಿದ್ದ..

ಬಸ್ ಕಳವು ಮಾಡಲು ಯತ್ನಿಸಿ ಕೊನೆಗೆ ಸಿಕ್ಕಿಬಿದ್ದ ಭೂಪ ಈಗ ಪೊಲೀಸರು ಅತಿಥಿಯಾಗಿದ್ದಾನೆ.

ದಕ್ಷಿಣ ಕನ್ನಡದಲ್ಲಿ ಸಿಟಿ ಬಸ್​ ಎಗರಿಸಿದ್ದ ಭೂಪ ಕೊನೆಗೂ ಸಿಕ್ಕಿಬಿದ್ದ..!

By

Published : Oct 6, 2019, 7:36 PM IST

ದಕ್ಷಿಣಕನ್ನಡ: ಬೈಕ್, ಕಾರು, ಆಟೋ ರಿಕ್ಷಾಗಳನ್ನು ಕಳವು ಮಾಡುವ ಭೂಪರಿದ್ದಾರೆ. ಆದರೆ, ಇಲ್ಲೊಬ್ಬ ಸಿಟಿ ಬಸ್‌ನೇ ಕಳ್ಳತನ ಮಾಡಿ ಸಿಕ್ಕಿಬಿದ್ದಿದಾನೆ.

ದಕ್ಷಿಣಕನ್ನಡ‌ ಜಿಲ್ಲೆಯ ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಎ ಆರ್ ಟ್ರಾವೆಲ್ಸ್ ಹೆಸರಿರುವ 44ಸಿ ನಂಬರ್​ನ ಬಸ್ ಇಂದು ಬೆಳಗ್ಗೆ ನಾಪತ್ತೆಯಾಗಿತ್ತು. ನಿತ್ಯ ಸ್ಟೇಟ್ ಬ್ಯಾಂಕ್-ಉಳ್ಳಾಲದ ನಡುವೆ ಓಡಾಡುವ ಸಿಟಿ ಬಸ್‌ನ ನಿಫಾಝ್ ಎಂಬಾತ ಉಳ್ಳಾಲದಿಂದ‌ ನಿನ್ನೆ ರಾತ್ರಿ ಚಲಾಯಿಸಿಕೊಂಡು ಉಡುಪಿಗೆ ಬಂದಿದ್ದ ಎನ್ನಲಾಗಿದೆ.

ಮಂಗಳೂರಿನ‌ ಬಸ್‌ ಉಡುಪಿಯಲ್ಲಿ‌ ಖಾಲಿಯಾಗಿ ಓಡಾಡುತ್ತಿರುವುದನ್ನು ಕಂಡ ಸಾರ್ವಜನಿಕರಲ್ಲೊಬ್ಬರು ಬಸ್‌ನ ತಡೆದು‌ ಉಳ್ಳಾಲದ ಪರಿಚಯಸ್ಥರಿಗೆ ಮಾಹಿತಿ‌ ನೀಡಿದ್ದಾರೆ. ಆಗ ಬಸ್​ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಉಳ್ಳಾಲದ ಪೊಲೀಸರ ಮೂಲಕ ಬಸ್ ಮಾಲೀಕರು ಉಡುಪಿಗೆ ಬಂದು ಬಸ್ ಕದ್ದ ಯುವಕನ ಸಹಿತ ಬಸ್‌ನ ಉಳ್ಳಾಲಕ್ಕೆ‌ ಕೊಂಡೊಯ್ದಿದ್ದಾರೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.

ಆ ಯುವಕ ಬಸ್‌ನ ಕದ್ದಿರೋದಾ, ವ್ಯವಹಾರಿಕ ಒಳಜಗಳವೋ ಅಥವಾ ಮಾನಸಿಕ ಸಮಸ್ಯೆಯಿಂದ ಬಸ್​ನ ಕದ್ದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ‌ ಇನ್ನಷ್ಟೇ ತಿಳಿಯಬೇಕಿದೆ. ನಿನ್ನೆಯಷ್ಟೇ ಬಸ್‌ಗೆ ಡೀಸೆಲ್ ತುಂಬಿಸಿ ಇನ್ನೇನು ಬೆಳಗ್ಗೆ‌ ಬಸ್​ ಸ್ವಚ್ಚಗೊಳಿಸಲು ಬಂದ ಬಸ್ ಸಿಬ್ಬಂದಿಗೆ ನಿಲ್ಲಿಸಿದ ಜಾಗದಲ್ಲಿ ಬಸ್​ ಇಲ್ಲದಿರುವುದು ಶಾಕ್ ನೀಡಿತ್ತು.

ABOUT THE AUTHOR

...view details