ಬೆಳ್ತಂಗಡಿ: ಕಾರು ಚಾಲಕ ವಾಸು ಸಪಲ್ಯ (66) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗ ದಯಾನಂದ ಸಪಲ್ಯ (32) ನನ್ನು ಇಂದು ಸಂಜೆ ಕೃತ್ಯ ನಡೆಸಿದ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ವೃತ್ತ ನಿರೀಕ್ಷಕ ಸಂದೇಶ್.ಪಿ.ಜಿ. ನೇತೃತ್ವದಲ್ಲಿ ಕರೆತಂದು ಸ್ಥಳ ಮಹಜರು ನಡೆಸಲಾಯಿತು.
ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು ಆ.24 ರಂದು ದಯಾನಂದ ಮುಂಜಾನೆ ತಂದೆಯನ್ನು ಅಮಾನುಷವಾಗಿ ಹತ್ಯೆ ಮಾಡಿ ಮಂಗಳೂರು ಸೇರಿದ್ದ. ಈ ಕುರಿತು ಪೊಲೀಸರು ಮೊಬೈಲ್ ಟ್ರೇಸ್ ಮಾಡಿ ಆ.26 ರಂದು ಬಂಧಿಸಿ ಬೆಳ್ತಂಗಡಿ ಠಾಣೆಗೆ ಕರತಂದಿದ್ದರು. ಸ್ಥಳ ಮಹಜರು ವೇಳೆ ತಾಯಿ ಗಾಯತ್ರಿ, ಸಹೋದರರಾದ ಸುದರ್ಶನ್, ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು. ಈ ವೇಳೆ ತಂದೆಯನ್ನೇ ಕೊಲೆಗೈದ ಮಗನನ್ನು ಕಂಡು ದುಃಖದಿಂದ ನಿನಗೆ ಗಲ್ಲು ಶಿಕ್ಷೆಯಾಗಲಿ ಎಂದು ಶಪಿಸಿದರು.
ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು ಹತ್ಯೆ ವೇಳೆ ಬಳಸಿದ್ದ ರಕ್ತಸಿಕ್ತ ವಸ್ತ್ರ ಪೊದೆಯಲ್ಲಿರಿಸಿದ್ದನ್ನು ಪೊಲೀಸರು ಮಹಜರು ನಡೆಸಿ ವಶಕ್ಕೆ ಪಡೆದರು. ಈತ ತಂದೆಯ ಕೊಲೆಗೆ ಎರಡು ತಿಂಗಳ ಹಿಂದೆಯೇ ಪೂರ್ವಯೋಜಿತವಾಗಿ ಮಾರಕಾಸ್ತ್ರ ಸಿದ್ಧಪಡಿಸಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು ಸ್ಥಳದಲ್ಲಿದ್ದ ಸಹೋದರ ಸುದರ್ಶನ್ ತಂದೆಯನ್ನು ಕೊಂದ ಪಾಪಕ್ಕೆ ಗಲ್ಲು ಶಿಕ್ಷೆಯಾಗಬೇಕು. ಅವನನ್ನು ಮನೆಗೆ ಸೇರಿಸುವುದಿಲ್ಲ. ಮಕ್ಕಳು ತಪ್ಪು ಮಾಡಿದರೆ ತಂದೆ-ತಾಯಿ ಬೈಯುವುದು ಸಹಜ. ಅವನನ್ನು 32 ವರ್ಷ ಕಾಲ ತಂದೆ - ತಾಯಿ ಸಾಕಿದ್ದಾರೆ. ನಮ್ಮ ತಂದೆ 25 ವರ್ಷ ಬೆಳ್ತಂಗಡಿಯಿಂದ ಮಂಗಳೂರಿಗೆ ಕಾರು ಓಡಿಸಿ ಜೀವನ ನಡೆಸಿದ್ದಾರೆ. ಕೊರೊನಾದಿಂದ 5 ತಿಂಗಳಿಂದ ಮನೆಯಲ್ಲಿದ್ದ ತಂದೆ ಊಟ ನೀಡಿ ಸಲಹಿದ್ದಾರೆ ಎಂದು ದುಃಖಿಸಿದರು. ಇದೀಗ ತನಿಖೆ ಮುಂದುವರೆದಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.
ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ಪಿಎಸ್ಐ ನಂದಕುಮಾರ್, ಎಎಸ್ಐ ದೇವಪ್ಪ, ಹೆಚ್.ಸಿ. ವೆಂಕಟೇಶ್, ವೃಷಭ್, ಇಬ್ರಾಹಿಂ, ಲತೀಫ್ ತನಿಖೆಯಲ್ಲಿ ಭಾಗವಹಿಸಿದ್ದರು.